Teamindia | ಕ್ರಿಕೆಟಿಗರನ್ನ ಬಿಡದ ಪುಷ್ಪ ಫೋಬಿಯಾ..!!
ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ರಿಲೀಸ್ ಆದ ಬಳಿಕ ಕ್ರಿಕೆಟಿಗರಿ ಪುಷ್ಪ ಫೋಬಿಯಾ ಹಿಡಿದುಕೊಂಡಿದೆ. ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆಯುತ್ತಿದ್ದರೂ ಕ್ರಿಕೆಟಿಗರು ಮಾತ್ರ ಪುಷ್ಪ ಡೈಲಾಗ್ ಹೇಳಿಕೊಂಡು ರೀಲ್ಸ್ ಮಾಡುತ್ತಲೇ ಇದ್ದಾರೆ. ಮುಖ್ಯವಾಗಿ ತಗ್ಗೋದೆ ಇಲ್ಲಾ ಅಂತಾ ಟೀಂ ಇಂಡಿಯಾ ಆಟಗಾರರು ವಿಡಿಯೋ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಸಹ ಕ್ರಿಕೆಟಿಗರಾದ ನವದೀಪ್ ಸೈನಿ ಮತ್ತು ಹರ್‌ಪ್ರೀತ್ ಬ್ರಾರ್ ಬಸ್ ನಲ್ಲಿ ಪುಷ್ಪ ಸಿನಿಮಾದ ಹಿಂದಿ ಡೈಲಾಗ್ ಗೆ ರೀಲ್ಸ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಚಾಹಲ್ ತಮ್ಮ ಇನ್‌ಸ್ಟಾ ದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಲೈಕ್‌ಗಳು ಮತ್ತು ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ.
https://www.instagram.com/reel/CaRSEYKOlnK/?utm_source=ig_web_copy_link
ಶ್ರೀಲಂಕಾ ವಿರುದ್ಧದ ಟಿ20 ಸರಣಿಯು ಫೆಬ್ರವರಿ 24 ರಂದು ಪ್ರಾರಂಭವಾಗಲಿದೆ. ಮೊದಲ ಟಿ20 ಲಕ್ನೋದಲ್ಲಿ ನಡೆಯಲಿದ್ದು, ಫೆಬ್ರವರಿ 26 ಮತ್ತು 27 ರಂದು ಧರ್ಮಶಾಲಾದಲ್ಲಿ ಎರಡು ಮತ್ತು ಮೂರನೇ ಟಿ20 ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಮಾರ್ಚ್ 4-8 ರಂದು ಮೊಹಾಲಿಯಲ್ಲಿ ಮತ್ತು ಎರಡನೇ ಟೆಸ್ಟ್ (ಹಗಲು ಮತ್ತು ರಾತ್ರಿ) ಮಾರ್ಚ್ 12-16 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
teamindia-chahal-saini-brar-reels








