3ನೇ ಏಕದಿನ ಪಂದ್ಯ : ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ.. ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಚಾನ್ಸ್ TeamIndia win the toss and elect to bowl first in the final ODI saaksha tv
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನಾಲ್ಕು ಬದಲಾವಣೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಿದೆ. ಸದ್ಯ ಟಾಸ್ ವಿನ್ ಆಗಿರುವ ರಾಹುಲ್, ಬೌಲಿಂಗ್ ಆಯ್ದುಕೊಂಡಿದ್ದಾರೆ.
ಇಂದಿನ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್. ಜಯಂತ್ ಯಾದದ್, ಪ್ರಸಿದ್ಧ್ ಕೃಷ್ಣ, ದೀಪಕ್ ಚಹಾರ್ ಗೆ ಅವಕಾಶ ನೀಡಲಾಗಿದೆ. ಅನುಭವಿ ಆಟಗಾರ ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ವೆಂಕಟೇಶ್ ಅಯ್ಯರ್, ಭುವನೇಶ್ವರ್ ಕುಮಾರ್ ಗೆ ಕೋಕ್ ನೀಡಲಾಗಿದೆ.

ಅಂದಹಾಗೆ ದೇಶಿ ಕ್ರಿಕೆಟ್ ನ ಹೀರೋ ರುತುರಾಜ್ ಗಾಯಕ್ವಾಡ್ ಗೆ ಇಂದಿನ ಪಂದ್ಯದಲ್ಲಿ ಅವಕಾಶ ನೀಡಬೇಕು ಎಂದು ಹಿರಿಯ ಕ್ರಿಕೆಟಿಗರು ವಾದಿಸಿದ್ದರು. ಆದ್ರೆ ನಾಯಕ ರಾಹುಲ್ ಈ ಪಂದ್ಯದಲ್ಲೂ ಅವರಿಗೆ ಚಾನ್ಸ್ ನೀಡಿಲ್ಲ.
ಈಗಾಗಲೇ ಸರಣಿ ಸೋತಿರುವ ಟೀಂ ಇಂಡಿಯಾ ಇಂದಿನ ಪಂದ್ಯಗೆದ್ದು ಮಾನ ಉಳಿಸಿಕೊಳ್ಳುವ ತವಕದಲ್ಲಿದೆ.








