ನವದೆಹಲಿ: ಹರಿಯಾಣ ಮತ್ತು ಪಂಜಾಬ್ ಮಧ್ಯೆ ಇರುವ ಶಂಭು ಗಡಿಯಲ್ಲಿ ರೈತರ ಮೇಲೆ ಪೊಲೀಸರು ಅಶ್ರುವಾಯು ಹಾಗೂ ಜಲ ಫಿರಂಗಿ ಬಳಸಿದ್ದಾರೆ.
ದೆಹಲಿ ಗಡಿ ಪ್ರವೇಶಕ್ಕೆ ಯತ್ನಿಸಿದ ರೈತರ ಮೇಲೆ ಪೋಲಿಸರು ಅಶ್ರುವಾಯು ಮತ್ತು ಜಲ ಫಿರಂಗಿ ಬಳಿಸಲಾಗಿದೆ. ಈ ಘಟನೆಯಲ್ಲಿ 17 ಜನ ರೈತರು ಗಾಯಗೊಂಡಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಪ್ರತಿಭಟನಾನಿರತ ರೈತರ ಮೇಲೆಯೇ ಈ ದಾಳಿ ನಡೆದಿದೆ. ಘಟನೆ ನಡೆದ ನಂತರ ರೈತರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ಹರಿಯಾಣ ಪೊಲೀಸರು ಭಾರಿ ಅಶ್ರುವಾಯು ನಡೆಸಿದರು. ಈ ಹಿನ್ನೆಲೆ ಇಂದಿನ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಆಂತರಿಕ ಸಭೆಯ ನಂತರ ನಾವು ನಮ್ಮ ಮುಂದಿನ ಕಾರ್ಯಕ್ರಮವನ್ನು ಘೋಷಿಸುತ್ತೇವೆ ಎಂದು ರೈತ ಮುಖಂಡ ತೇಜ್ವೀರ್ ಸಿಂಗ್ ಹೇಳಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಂಬಾಲಾದ ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಡಿ.14 ರಂದು ಬೆಳಗ್ಗೆ 6 ರಿಂದ ಡಿ.17 ರವರೆಗೆ ಸ್ಥಗಿತಗೊಳಿಸಲಾಗಿದೆ.








