ಬೆಂಗಳೂರು, ಮೇ 28 : ದೇಶದ ವಾಯುಪಡೆಗೆ ಶಕ್ತಿ ತುಂಬಲು ಇದೀಗ 2ನೇ ಸ್ಕ್ವಾಡ್ರನ್ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದೆ. ಹೆಚ್ಎಎಲ್ ನಿರ್ಮಿತ ತೇಜಸ್ ಎಂಕೆ- ಎಫ್ಒಸಿ ಯುದ್ಧ ವಿಮಾನಗಳ 2ನೇ ಸ್ಕ್ವಾಡ್ರನ್ ಅನ್ನು ಭಾರತೀಯ ವಾಯು ಸೇನೆಯ ಮುಖ್ಯಸ್ಥ ಭಾರತೀಯ ಸೇನೆಗೆ ಸಮರ್ಪಿಸಿದ್ದಾರೆ.
ತಮಿಳುನಾಡಿನಲ್ಲಿ ಕೊಯಮತ್ತೂರಿನ ಸುಲೂರ್ ವಾಯುಪಡೆ ನಿಲ್ದಾಣದಲ್ಲಿ ವಾಯುಪಡೆ ಮುಖ್ಯಸ್ಥ ಆರ್. ಕೆ. ಎಸ್ ಭಡೌರಿಯಾ ಅವರು ಸಂಪೂರ್ಣ ಸ್ವದೇಶಿ ನಿರ್ಮಿತ ಶಸ್ತ್ರಸಜ್ಜಿತವಾದ ನೂತನ ತೇಜಸ್ ಎಂಕೆ -1 ಎಫ್.ಒ.ಸಿ (ಫೈನಲ್ ಆಪರೇಶನ್ಸ್ ಕ್ಲಿಯರೆನ್ಸ್) ಯುದ್ಧ ವಿಮಾನಗಳ ಎರಡನೇ ಸ್ಕ್ವಾಡ್ರನ್ ಅನ್ನು ಸೇನೆಗೆ ಬರಮಾಡಿಕೊಂಡರು.
ತೇಜಸ್ ಎಂಕೆ- ಎಫ್.ಒ.ಸಿ (ಫೈನಲ್ ಆಪರೇಷನ್ಸ್ ಕ್ಲಿಯರೆನ್ಸ್) ಯುದ್ಧ ವಿಮಾನಗಳ 2ನೇ ಸ್ಕ್ವಾಡ್ರನ್ ಅತ್ಯಂತ ವೇಗವಾಗಿ ಚಲಿಸುವ ಲಘು ಯುದ್ಧನೌಕೆಯಾಗಿದ್ದು, ಲೇಸರ್-ನಿರ್ದೇಶಿತ ಬಾಂಬುಗಳಂತಹ ಶಸ್ತ್ರಾಸ್ತ್ರಗಳನ್ನ ಇದಕ್ಕೆ ಅಳವಡಿಸಲಾಗಿದೆ. ಈ ಯುದ್ಧ ನೌಕೆಗಳು ಮಾರ್ಗದರ್ಶನವಿಲ್ಲದೆಯೂ ಬಾಂಬ್ಗಳನ್ನು ಬೀಳಿಸುವ ಸಾಮರ್ಥ್ಯವನ್ನು ಹೊಂದಿವೆ.
ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್ ಭಡೌರಿಯಾ ಅವರು ತೇಜಸ್ ಎಂಕೆ- ಎಫ್.ಒ.ಸಿ (ಫೈನಲ್ ಆಪರೇಷನ್ಸ್ ಕ್ಲಿಯರೆನ್ಸ್) ಯುದ್ಧ ವಿಮಾನಗಳ 2ನೇ ಸ್ಕ್ವಾಡ್ರನ್ ಅನ್ನು ವಾಯುನೆಲೆಯಲ್ಲಿ ಹಾರಿಸುವ ಮೂಲಕ ವಾಯುಪಡೆಗೆ ಸೇರ್ಪಡೆಗೊಳಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಭಡೌರಿಯಾ ಅವರು, ಭಾರತೀಯ ವಾಯುಪಡೆ ಈಗ ವಿದೇಶಿ ಉತ್ಪನ್ನಗಳಿಗಿಂತ ಸಂಪೂರ್ಣ ಸ್ವದೇಶಿ ನಿರ್ಮಿತ ಉತ್ಪನ್ನಗಳನ್ನೇ ಅವಲಂಬಿಸಿದೆ ಎಂದು ಹೇಳಿದರು.
ಭಾರತ – ಚೀನಾ ಗಡಿಯಲ್ಲಿ ಪರಿಸ್ಥಿತಿ ಉಲ್ಬಣಗೊಂಡ ಈ ಸಂದರ್ಭದಲ್ಲಿ ತೇಜಸ್ ಸ್ಕ್ವಾಡ್ರನ್ ಮಹತ್ವದ ಪಾತ್ರವಹಿಸಲಿವೆ.








