ಪ್ರೋ ಕಬಡ್ಡಿ 8 : ಆಡಿದ್ದು 10 ಪಂದ್ಯಗಳು… 2 ಡ್ರಾ… 8 ಸೋಲು…!!! ಒಂದೂ ಒಂದು ಗೆಲ್ಲದ ಟೀಮ್ ಇದು..!!
ಡಿಸೆಂಬರ್ 22 ರಿಂದ ಬೆಂಗಳೂರಿನಲ್ಲಿ ಆರಂಭವಾದ ಪ್ರೋ ಕಬಡ್ಡಿ ಲೀಗ್ 2022 ರ ಮೊದಲಾರ್ಧ ಇನ್ನೇನು ಕೊನೆ ಹಂತ ತಲುಪಿದ್ದು ಈಗಾಗಲೇ ದ್ವಿತೀಯಾರ್ಧದ ವೇಳಾಪಟ್ಟಿಯನ್ನೂ ಕೂಡ ರಿಲೀಸ್ ಮಾಡಲಾಗಿದೆ.. ಲೀಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಬೆಂಗಳೂರು ಬುಲ್ಸ್ , ದಬಾಂಗ್ ದೆಹಲಿ , ಪಟ್ನಾ ಪೈರೇಟ್ಸ್ ಮೊದಲ ಮೂರು ಸ್ಥಾನಗಳಲ್ಲಿದ್ದು , ಮೊದಲ ಸ್ಥಾನಕ್ಕಾಗೀ ಮೂರೂ ಟೀಮ್ ಗಳ ನಡುವೆ ಪೈಪೋಟಿ ಇದೆ..
ನಾಲ್ಕನೇ ಸ್ಥಾನದಲ್ಲಿರೋ ಯುಪಿ ಯೋಧಾ ಕೂಡ ಬಲಿಷ್ಠವಾಗಿಯೇ ಆಡ್ತಿದೆ.. ಆದ್ರೆ ಇದೆಲ್ಲದ್ರರ ನಡುವೆ ದುರಾದೃಷ್ಟವೇನೋ ಎಂಬಂತೆ ಆಡಿರುವ 10 ಪಂದ್ಯಗಳಲ್ಲಿ ಒಂದೇ ಒಂದು ಗೆಲ್ಲದೇ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಿದೆ ತೆಲುಗು ಟೈಟನ್ಸ್.. ಬೆಂಗಳೂರು ಬುಲ್ಸ್ ನ ಮಾಜಿ ಕ್ಯಾಪ್ಟನ್ ರೋಹಿತ್ ಈಗ ತೆಲುಗು ಟೈಟನ್ಸ್ ನೇತೃತ್ವ ವಹಿಸಿದ್ದಾರೆ.. ಆದ್ರೆ 2 ವರ್ಷದ ಹಿಂದೆ ಬೆಂಗಳೂರು ತಂಡ ಕಪ್ ಗೆದ್ದಾಗ ಮಾಡಿದ್ದ ಮ್ಯಾಜಿಕ್ ಈಗ ತೆಲುಗು ಟೈಟನ್ಸ್ ನಲ್ಲಿ ಮಾಡಿಲ್ಲ… ಆಡಿರುವ ಅಷ್ಟೂ ಪಂದ್ಯಗಳಲ್ಲಿ 2 ಮ್ಯಾಚ್ ಗಳನ್ನ ಟೈ ಮಾಡಿಕೊಂಡಿರುವ ಟೈಟನ್ಸ್ ಉಳಿದೆಲ್ಲವನ್ನೂ ಸೋತಿರುವುದೇ..
ಸದ್ಯ ಬೆಂಗಳೂರಿನಲ್ಲಿ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ನಡೆಯುತ್ತಿದ್ದು, ಜನವರಿ 17 ರಂದು ನಡೆದ 61 ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ಸೆಣಸಾಟ ನಡೆಸಿದವು. ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ ಕಣಕ್ಕಿಳಿದಿದ್ದ ತೆಲುಗು ಟೈಟಾನ್ಸ್ ಟೂರ್ನಿಯಲ್ಲಿನ ತನ್ನ ಎಂಟನೇ ಸೋಲನ್ನು ಕಂಡಿದೆ. ಹೌದು, ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಈ ಪಂದ್ಯವನ್ನು ಸೇರಿ ತೆಲುಗು ಟೈಟಾನ್ಸ್ ಒಟ್ಟು 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 8 ಪಂದ್ಯಗಳಲ್ಲಿ ಸೋತು, 2 ಪಂದ್ಯಗಳಲ್ಲಿ ಡ್ರಾ ಮಾಡಿಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಾಲ್ ವಾರಿಯರ್ಸ್ ತಂಡವು ತೆಲುಗು ಟೈಟಾನ್ಸ್ ತಂಡವನ್ನು 28 – 27 ಅಂಕಗಳ ಅಂತರದಿಂದ ಸೋಲಿಸಿದೆ.
ಆದ್ರೆ ಟೈಟನ್ಸ್ ಸೋತರೂ ಕೂಡ ಜಸ್ಟ್ ಮಿಸ್ ನಲ್ಲಿ ಕೇವಲ ಒಂದೇ ಒಂದು ಅಂಕದ ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದೆ. ಬೆಂಗಾಲ್ ವಾರಿಯರ್ಸ್ ತಂಡದ ಮಣೀಂದರ್ ಸಿಂಗ್ ಸೂಪರ್ 10 ಗಳಿಸುವುದರ ಮೂಲಕ ಮಿಂಚಿದರು.. ತಂಡದ ಅದ್ಭುತ ಡಿಫೆಂಡಿಂಗ್ ಕೂಡ ಗೆಲುವಿಗೆ ಮುಖ್ಯ ಕಾರಣವಾಯ್ತು..
ತೆಲುಗು ಟೈಟಾನ್ಸ್ ತಂಡದ ಪರ ರೈಡರ್ ರಜನೀಶ್ ಸೂಪರ್ 10 ( 11 ಅಂಕಗಳು ) ಕಲೆ ಹಾಕಿದರು. ಇತ್ತಂಡಗಳ ನಡುವೆ ನಡೆದ ಈ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಮಧ್ಯಂತರಕ್ಕೆ ತೆಲುಗು ಟೈಟನ್ಸ್ 13 ಅಂಕ ಗಳಿಸಿದರೆ ಬೆಂಗಾಲ್ ವಾರಿಯರ್ಸ್ 14 ಅಂಕಗಳನ್ನು ಪಡೆದುಕೊಂಡು 1 ಅಂಕದ ಮುನ್ನಡೆಯನ್ನು ಸಾಧಿಸಿತ್ತು. ದ್ವಿತೀಯಾರ್ಧದ ಐದನೇ ನಿಮಿಷದಲ್ಲಿ ತೆಲುಗು ಟೈಟಾನ್ಸ್ ತಂಡದ ರಜನೀಶ್ ಮಾಡಿದ 3 ಅಂಕಗಳ ರೈಡ್ ತಂಡಕ್ಕೆ 4 ಅಂಕಗಳ ಮುನ್ನಡೆಯನ್ನು ತಂದುಕೊಟ್ಟಿತ್ತು. ಹೀಗೆ ಮುನ್ನಡೆಯನ್ನು ಸಾಧಿಸಿದ್ದ ತೆಲುಗು ಟೈಟಾನ್ಸ್ ತಂಡವನ್ನು ಬೆಂಗಾಲ್ ವಾರಿಯರ್ಸ್ ತಂಡ ಕಟ್ಟಿ ಹಾಕಿತು. ಪಂದ್ಯ ಮುಕ್ತಾಯವಾಗುವುದಕ್ಕೆ 2 ನಿಮಿಷಗಳು ಬಾಕಿ ಇದ್ದಾಗ ತೆಲುಗು ಟೈಟಾನ್ಸ್ ತಂಡದ ರಜನೀಶ್ ಅವರನ್ನು ಬೆಂಗಾಲ್ ವಾರಿಯರ್ಸ್ ತಂಡದ ರಣ್ ಸಿಂಗ್ ಟ್ಯಾಕಲ್ ಮಾಡಿದರು. ಈ ಮೂಲಕ ತೆಲುಗು ಟೈಟಾನ್ಸ್ ಆಲ್ ಔಟ್ ಆಗಿ ಬೆಂಗಾಲ್ ವಾರಿಯರ್ಸ್ ವಿರುದ್ಧ 1 ಅಂಕದ ಸೋಲನ್ನು ಅನುಭವಿಸಿತು.
ಈ ಗೆಲುವು ಬೆಂಗಾಲ್ ವಾರಿಯರ್ಸ್ ಗೆ ಐದನೇ ಗೆಲುವಾಗಿತ್ತು… ಟೈಟನ್ಸ್ ಗೆ 8ನೇ ಸೋಲು.. ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಗಿರುವ ತೆಲುಗು ಟೈಟನ್ಸ್ ದ್ವಿತೀಯಾರ್ಧದಲ್ಲಿ ಆದ್ರೂ ಮೋಡಿ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ..








