ವಿಶ್ವದ ಅತ್ಯಂತ ದುಬಾರಿ ನಗರ ಯಾವುದು ಗೊತ್ತಾ..?
ವಿಶ್ವದ ಅತ್ಯಂತ ದುಬಾರಿ ನಗರ ಇಸ್ರೇಲ್ನ ಟೆಲ್ ಅವಿವ್ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (EIU) ತಿಳಿಸಿದೆ.
ಹೌದು ಜನರು ವಾಸಿಸಲು ವಿಶ್ವದ ಅತ್ಯಂತ ದುಬಾರಿ ನಗರವಾಗಿ ಹೊರಹೊಮ್ಮಿದೆ .. ಈ ಹಿಂದೆ ಜಗತ್ತಿನ ಐದನೇ ದುಬಾರಿ ನಗರವಾಗಿದ್ದ ಟೆಲ್ ಅವಿವ್, ಈ ಬಾರಿ ಪ್ಯಾರಿಸ್ ಮತ್ತು ಸಿಂಗಪುರದಂತಹ ದುಬಾರಿ ನಗರಗಳನ್ನೂ ಮೀರಿ ಮೊದಲ ಸ್ಥಾನಕ್ಕೇರಿದೆ.
ಇಐಯು ಬುಧವಾರ ಪ್ರಕಟಿಸಿರುವ ವರದಿಯಲ್ಲಿ ನಗರದಲ್ಲಿ ದಿನಸಿ ಮತ್ತು ಸಾರಿಗೆ ವೆಚ್ಚಗಳ ಏರಿಕೆ ಆಗಿರುವುದನ್ನು ಉಲ್ಲೇಖಿಸಿದೆ. ನಗರದಲ್ಲಿ ಬಾಡಿಗೆಯೂ ದುಬಾರಿ ಆಗಿದೆ. ಬೆಲೆ ಏರಿಕೆಯಿಂದಾಗಿ ಇಲ್ಲಿನ ನಿವಾಸಿಗಳ ವೆಚ್ಚಗಳು ದುಪ್ಪಟ್ಟು ಆಗಿವೆ. ಟೆಲ್ ಅವಿವ್, ಇಸ್ರೇಲ್ನ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ. ಇಲ್ಲಿ ವಿಶ್ವ ದರ್ಜೆಯ ರೆಸ್ಟೋರೆಂಟ್ಗಳು ಮತ್ತು ಹೊಸ ಐಷಾರಾಮಿ ಹೊಟೇಲ್ ಗಳು ಇವೆ.








