ಹೈದರಾಬಾದ್: ಪಕ್ಕದ ತೆಲಂಗಾಣ ಸರ್ಕಾರ ಕೂಡ ಜಾತಿ ಗಣತಿ ಆರಂಭಿಸಿದೆ.
ಅಲ್ಲಿನ ಸಿಎಂ ರೇವಂತ್ ರೆಡ್ಡಿ (Revanth Reddy) ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿ ಆಧಾರಿತ ಗಣತಿ (Caste Survey) ಕಾರ್ಯ ಆರಂಭಿಸಿದೆ. ಈ ಕುರಿತು ಕಾಂಗ್ರೆಸ್ ನ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದು, ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಮುಂದಿನ ಕೆಲವು ವಾರಗಳಲ್ಲಿ 80 ಸಾವಿರ ಜಾತಿ ಗಣತಿದಾರರು ಮನೆ ಮನೆಗಳಿಗೆ ತೆರಳಿ ಜಾತಿ ಗಣತಿ ಕಾರ್ಯ ನಡೆಸಲಿದ್ದಾರೆ. ತೆಲಂಗಾಣದ 33 ಜಿಲ್ಲೆಗಳಲ್ಲಿ 1.17 ಕೋಟಿ ಕುಟುಂಬಗಳನ್ನು ಗಣತಿ ಮಾಡಲಿದ್ದಾರೆ. 1931 ರಿಂದ ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಜಾತಿ ಆಧಾರಿತ ಗಣತಿ ಕಾರ್ಯ ನಡೆಯುತ್ತಿದೆ. ರಾಹುಲ್ ಗಾಂಧಿ ಹೇಳಿದಂತೆ ಜಾತಿಗಣತಿ ನಡೆಯುತ್ತಿದ್ದು, ಇದು ದೇಶದ ಜಾತಿಗಣತಿಯ ನೀಲನಕ್ಷೆಯಾಗಲಿದೆ ಜೈರಾಮ್ ರಮೇಶ್ ಹೇಳಿದ್ದಾರೆ.