ತೆಲಂಗಾಣ: ದೇಶದ ಆರು ರಾಜ್ಯಗಳ ಬಳಿಕ ತೆಲಂಗಾಣ ಸರ್ಕಾರ ಸಿಎಎ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ವಿರುದ್ಧ ಸೋಮವಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ. ಇಂದು ವಿಧಾನಸಭೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಸಿಎಎ ಹಾಗೂ ಎಸ್ ಪಿಆರ್ ವಿರುದ್ಧ ನಿರ್ಣಯ ಮಂಡಿಸಿದರು. ನಿರ್ಣಯದಲ್ಲಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ 2019ಕ್ಕೆ ತಿದ್ದುಪಡಿ ತರಬೇಕು ಮತ್ತು ಯಾವುದೇ ಧರ್ಮ ಅಥವಾ ದೇಶದವರಿಗೆ ಪೌರತ್ವ ನೀಡುವಂತಾಗಬೇಕು ಎಂದು ಒತ್ತಾಯಿಸಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಚಂದ್ರಶೇಖರ್ ರಾವ್ ಅವರು, ದೇಶಕ್ಕಾಗಿ ಇಂತಹ ಒಡೆದು ಆಳುವ ಮತ್ತು ಸಂಕುಚಿತ ಮನಸ್ಸಿನ ರಾಜಕೀಯದ ಅವಶ್ಯಕತೆ ಇದೆಯೇ. ವಿದೇಶಿಯರಿಗೆ ಪೌರತ್ವ ನೀಡುವ ಅಗತ್ಯವಿದ್ದರೂ, ಅದನ್ನು ನೀಡುವ ಪ್ರಸ್ತುತ ವಿಧಾನ ಸರಿಯಾಗಿಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ರು. ಅಲ್ಲದೆ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಬೇಡಿ. ಕಾನೂನಿನ ಪ್ರಕಾರ ಪ್ರತಿಯೊಬ್ಬರನ್ನು ಸಮಾನಾಗಿ ನೋಡಬೇಕು. ಹೀಗಾಗಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಕೆಸಿಆರ್ ಮನವಿ ಮಾಡಿದ್ದಾರೆ.
ಇನ್ನು ತೆಲಂಗಾಣ, ಕೇರಳ, ಪಂಜಾಬ್, ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಬಿಹಾರ ನಂತರ ಸಿಎಎ ಹಾಗೂ ಎನ್ ಪಿಆರ್ ವಿರೋಧಿಸಿದ ಏಳನೇ ರಾಜ್ಯವಾಗಿದೆ.








