ತೆಲಂಗಾಣದಲ್ಲಿ ಮನಕಲಕುವ ಘಟನೆ – ಅಣ್ಣನಿಗೆ ರಾಖಿ ಕಟ್ಟಲು ಬಂದವರು ಶವಕ್ಕೆ ರಾಖಿ ಕಟ್ಟುವಂತಾಯ್ತು..!
ತೆಲಂಗಾಣ : ರಕ್ಷಾ ಬಂಧನದ ದಿನವೇ ತೆಲಂಗಾಣದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ.. ಐವರು ಸಹೋದರಿಯರು ರಾಖಿ ಕಟ್ಟಲು ಅಣ್ಣನ ಮನೆಗೆ ಬಂದಿದ್ದಾರೆ.. ಆದ್ರೆ ಅಲ್ಲಿ ಅಣ್ಣ ಮೃತಪಟ್ಟಿದ್ದನ್ನ ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. 59 ವರ್ಷದ ಚಿಂತಪಲ್ಲಿ ಲಕ್ಷ್ಮಯ್ಯ ಎಂಬುವ ವ್ಯಕ್ತಿ ಮೃತಪಟ್ಟಿದ್ದಾರೆ. ಅವರ ತಂಗಿಯರು ಅಣ್ಣನಿಗೆ ರಾಖಿ ಕಟ್ಟಲೆಂದು ಬಂದಿದ್ದ ವೇಳೆ ಅಣ್ಣನ ಸಾವಿನ ವಿಚಾರ ತಿಳಿದು ಆಘಾತಕ್ಕೆ ಒಳಗಾಗಿದ್ದಾರೆ..
ಕಣ್ಣೀರು ಹಾಕುತ್ತಲೇ ಅಣ್ಣನಿಗೆ ಐವರು ಸಹೋದರಿಯರು ರಾಖಿ ಕಟ್ಟಿದ್ದಾರೆ. ಸೋದರಿಯರಾದ ಎರಾ ಲಕ್ಷ್ಮಮ್ಮ, ನಾಮಾ ಪದ್ಮಾ, ಅಲ್ಲಾಪುರಿ ವೆಂಕಟಮ್ಮ, ಕದಿರಿ ಕೋಟಮ್ಮಾ ಮತ್ತು ಜಕ್ಕಿ ಕವಿತಾ ಅಣ್ಣನ ಜೀವವಿಲ್ಲದ ಕೈಯಿಗೆ ರಾಖಿ ಕಟ್ಟಿದ್ದಾರೆ. ತೆಲಂಗಾಣದ ನಲಗೊಂದಾ ಜಿಲ್ಲೆಯ ಇಂಡುಗುಲಾ ಗ್ರಾಮ ಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ.