ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹಿಂದಿ ಕಿರುತೆರೆ ನಟ ರಿತುರಾಜ್ ಸಿಂಗ್ ಕೂಡ ಅದಕ್ಕೆ ಬಲಿಯಾಗಿದ್ದಾರೆ.
ರಿತುರಾಜ್ ಸಿಂಗ್ ಹೃದಯ ಸ್ತಂಭನದಿಂದ 59 ವರ್ಷ ವಯಸ್ಸಾಗಿತ್ತು. ರಿತುರಾಜ್ ಆಪ್ತ ಅಮಿತ್ ಬೆಹ್ಲ್ ನಿಧನದ ಕುರಿತು ಮಾಧ್ಯಮಕ್ಕೆ ಅಧಿಕೃತ ಮಾಹಿತಿ ನೀಡಿದ್ದಾರೆ. ಇವರು ಪ್ಯಾಂಕ್ರಿಯಾಟಿಕ್ ಕಾಯಿಲೆಯಿಂದ ಹಲವು ದಿನಗಳಿಂದ ಬಳಲುತ್ತಿದ್ದರು. ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಮೇಲೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದರು. ಆದರೆ, ಮತ್ತೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ನಟನ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ರಿತುರಾಜ್ ಹಲವಾರು ಶೋಗಳಲ್ಲಿ ನಟಿಸಿದ್ದಾರೆ. ಲಾಡೋ 2 ಸೀರಿಯಲ್ನಲ್ಲಿ ಬಲವಂತ ಚೌಧರಿ ಪಾತ್ರದಲ್ಲಿ ನಟಿಸಿದ್ದಾರೆ.