ತೆಲುಗಿನ ಖ್ಯಾತ ಹಾಸ್ಯ ನಟ ಶಿವಾಜಿರಾಜ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನಲೆ ತಕ್ಷಣ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಬಣ್ಣಹಚ್ಚುವ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದಾರೆ ಶಿವಾಜಿರಾಜ. ಸಿನಿಮಾ ಜೊತೆಗೆ ಅವರು ಕಿರುತೆರೆಯಲ್ಲಿಯೂ ಖ್ಯಾತಿಗಳಿಸಿದ್ದಾರೆ. ಸದ್ಯ ಶಿವಾಜಿರಾಜ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ತೆಲುಗಿನ ಕಲ್ಲು, ಅಹೋ ಬ್ರಹ್ಮ ಓಹೋ ಶಿಷ್ಯ, ದೇವುಡು, ಕಾಳಿಸುಂದರ್ ರಾ, ಮನಸಿಷ್ಠ ರಾ, ನಿನ್ನು ಚುಡಲಾನಿ, ಶಂಕರ್ ದಾದಾ ಎಂಬಿಬಿಎಸ್, ನಕ್ಷತ್ರಂ ಸೇರಿದಂತೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಶಿವಾಜಿ ರಾಜ. ಇನ್ನು ಅವರು ಕೊನೆಯದಾಗಿ ಬ್ರೋಚೆವರೇವರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿದ್ದಾರೆ.








