ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. 3 ಮಿಲಿಯನ್ ವೀಕ್ಷಣೆ ಪಡೆದಿರೋ ರಾಬರ್ಟ್ ಟೀಸರ್‌ನಿಂದ ಚಿತ್ರದ ಮೇಲಿದ್ದ ನಿರೀಕ್ಷೆ ಡಬಲ್ ಮಾಡಿದೆ. ನಿರ್ದೇಶಕ ತರುಣ್ ಅವರ ಕಾನ್ಸೆಪ್ಟ್ ಗೆ ದರ್ಶನ್ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಈ ಸಿನಿಮಾ ಏಪ್ರಿಲ್ 9ರಂದು ರಿಲೀಸ್ ಆಗಲಿದೆ ಎಂದು ಈಗಾಗಲೇ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಘೋಷಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ದೇಶದ ನಾನಾ ಭಾಗಗಳಲ್ಲಿ ರಾಬರ್ಟ್ ಅಬ್ಬರವಿರಲಿದೆ. ಸದ್ಯ ವಿಚಾರ ಏನಂದ್ರೆ, ರಾಬರ್ಟ್ ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲೂ ರಿಲೀಸ್ ಆಗಲಿದೆ. ಜೊತೆಗೆ ತಮಿಳು, ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆಯಂತೆ.
ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದಲ್ಲಿ ಆಶಾ ಭಟ್ ಫಿಮೇಲ್ ಲೀಡ್‌ನಲ್ಲಿದ್ದಾರೆ. ಉಳಿದಂತೆ ಟಾಲಿವುಡ್ ವಿಲನ್ ಜಗಪತಿ ಬಾಬು, ರವಿಶಂಕರ್, ದೇವರಾಜ್, ವಿನೋದ್ ಪ್ರಭಾಕರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ ಸೇರಿದಂತೆ ಹಲವರು ನಟಿಸಿದ್ದಾರೆ.
ಭಾರತದ ಕೇಂದ್ರ ಭಾಷಾ ಸಂಸ್ಥೆ (CIIL), ಮೈಸೂರು ನೇಮಕಾತಿ 2025
CIIL Recruitment 2025 – ಭಾರತದ ಕೇಂದ್ರ ಭಾಷಾ ಸಂಸ್ಥೆ (CIIL), ಮೈಸೂರು 2025ನೇ ಸಾಲಿಗೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು...