ಜಮ್ಮು ಕಾಶ್ಮೀರದಲ್ಲಿ ಅಗ್ನಿ ಅವಘಡಕ್ಕೆ ದೇವಸ್ಥಾನ ಸುಟ್ಟು ಭಸ್ಮ…
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ಅಗ್ನಿ ಅವಘಡದಲ್ಲಿ ದೇವಸ್ಥಾನವೊಂದು ಸುಟ್ಟು ಭಸ್ಮವಾಗಿದೆ. ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ ದಕ್ಷಿಣ ಕಾಶ್ಮೀರದ ಶೋಪಿಯಾನ್ನ ಝೈನಾಪೋರಾ ಪ್ರದೇಶದಲ್ಲಿನ ರೋಜಾನಾ ದೇವಸ್ಥಾನವು ನಿನ್ನೆ ರಾತ್ರಿ ಅಗ್ನಿ ದುರಂತದಲ್ಲಿ ಸುಟ್ಟುಹೋಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶೋಪಿಯಾನ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಚಿನ್ ಕುಮಾರ್ ವೈಶ್ಯ ಹಾಗೂ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೋಪಿಯಾನ್ ಅಮೃತ್ ಪಾಲ್ ಸಿಂಗ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.
ತಪ್ಪಿತಸ್ಥರೆಂದು ಕಂಡು ಬಂದವರನ್ನು ಬಿಡುವುದಿಲ್ಲ ಮತ್ತು ಅವರನ್ನು ಕಾನೂನು ಕ್ರಮಕ್ಕೆ ತರಲಾಗುವುದು ಎಂದು ವೈಶ್ಯ ಹೇಳಿದರು.ಫೋರೆನ್ಸಿಕ್ ತಂಡವು ದೇವಾಲಯದ ಮಾದರಿಗಳನ್ನು ಸಹ ಸಂಗ್ರಹಿಸಿದೆ ಮತ್ತು ಪೊಲೀಸರು ಬೆಂಕಿಯ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಈ ಸಂಬಂಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.
ದೇವಸ್ಥಾನವನ್ನು ತಕ್ಷಣ ಜೀರ್ಣೋದ್ಧಾರ ಮಾಡುವಂತೆ ಝೈನಾಪೋರಾದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ಗೆ ಡಿಎಂ ನಿರ್ದೇಶನ ನೀಡಿದ್ದಾರೆ.
Temple gutted in fire in Jammu and Kashmir’s Shopian








