ಹೊಸದಿಲ್ಲಿ, ಜೂನ್ 9: ಮರ್ಸೀಡೀಸ್ ಬೆಂಜ್ ಸ್ಪೋರ್ಟ್ ಕಾರು ಹತ್ತು ವರ್ಷದ ಬಾಲಕಿಯ ಮೇಲೆ ಹರಿದ ಘಟನೆ ನವದೆಹಲಿಯ ತಿಲಕ್ ನಗರದಲ್ಲಿ ನಡೆದಿದೆ.
ಪಾರ್ಕಿಂಗ್ ಏರಿಯಾದಲ್ಲಿ ಬಾಲಕಿ ಆಟವಾಡುತ್ತಿದ್ದಾಗ 31 ವರ್ಷದ ಅಖಿಲೇಶ್ ಕಾರನ್ನು ಹಿಂದಕ್ಕೆ ತೆಗೆದಿದ್ದು, ಮಗು ಹಿಂದೆ ಇರುವುದು ತಿಳಿಯದೇ ಬಾಲಕಿಯ ಮೇಲೆ ಕಾರು ಹರಿದಿದೆ.
ನಂತರ ಕೂಡಲೇ ಬಾಲಕಿಯನ್ನು ದೀನ ದಯಾಳ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಆಕೆ ಮೃತಪಟ್ಟಿದ್ದಾಳೆ.
ಬೆಂಝ್ ಕಾರು ಜಸ್ಬೀರ್ ಸಿಂಗ್ ಎಂಬ ಉದ್ಯಮಿಗೆ ಸೇರಿದ್ದು, ಬಾಲಕಿಯ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ವಾಹನ ಚಾಲಕನನ್ನು ಬಂಧಿಸಿದ್ದು, ಪೋರೆನ್ಸಿಕ್ ಲ್ಯಾಬ್ ಸ್ಪಾಟ್ ನಲ್ಲಿ ಪರಿಶೀಲನೆ ಮಾಡಲು ಮುಂದಾಗಿದೆ.
ಪೋಸ್ಟ್ ಮಾರ್ಟ್ಂ ನಂತರ ಬಾಲಕಿಯ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಣಕಹಳೆ ಜೋರಾಗಿ ಮೊಳಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ...








