ಸಚಿನ್ ಡ್ರೈವ್… ಕೊಹ್ಲಿ ಸ್ಟ್ರೀಟ್.. ದೇವ್ ಟೆರೇಸ್…! ಏನಿದು..?
ಸಚಿನ್ ಡ್ರೈವ್… ವಿರಾಟ್ ಕ್ರೆಸೆಂಟ್… ಕಪಿಲ್ ಟೆರೇಸ್… ಈ ಹೆಸರಿನ ಬೀದಿಗಳು ಭಾರತದಲ್ಲಿ ಎಷ್ಟಿದೆಯೋ ಗೊತ್ತಿಲ್ಲ. ಆದ್ರೆ ದೂರದ ಆಸ್ಟ್ರೇಲಿಯಾದ ಮೆಲ್ಬರ್ನ್‍ನ ರಾಕ್‍ಬ್ಯಾಂಕ್ ಉಪನಗರದ ವಸತಿ ಪ್ರದೇಶದ ಬೀದಿಗಳಲ್ಲಿ ಭಾರತೀಯ ಕ್ರಿಕೆಟಿಗರ ಈ ಹೆಸರುಗಳು ರಾರಾಜಿಸಲಿವೆ.
ಹೌದು, ಈ ವಸತಿ ಪ್ರದೇಶವನ್ನು ಆಕೊಲೆಡ್ ಎಸ್ಟೆಟ್ ಸಂಸ್ಥೆಯು ಅಭಿವೃದ್ದಿಪಡಿಸುತ್ತಿದೆ. ಇಲ್ಲಿ ತೆಂಡುಲ್ಕರ್ ಡ್ರೈವ್, ಕೊಹ್ಲಿ ಕ್ರೆಸೆಂಟ್, ದೇವ್
ಟೇರಸ್ ಹೀಗೆ ಹೆಸರುಗಳ ಮೂಲಕ ಗ್ರಾಹಕರನ್ನು ಸೆಳೆಯುವಂತಹ ಪ್ರಯತ್ನವನ್ನು ಆಕೊಲೆಡ್ ಎಸ್ಟೆಟ್ ಸಂಸ್ಥೆಯು ಮಾಡುತ್ತಿದೆ.
ಹಾಗಂತ ಇಲ್ಲಿ ಕೇವಲ ಭಾರತೀಯ ಕ್ರಿಕೆಟಿಗರ ಹೆಸರುಗಳು ಮಾತ್ರವಲ್ಲ. ಬದಲಾಗಿ ಸ್ಟೀವ್ ವಾ ಸ್ಟ್ರೀಟ್, ಮಿಯಾಂದಾದ್ ಸ್ಟ್ರೀಟ್, ಆಂಬ್ರೋಸ್ ಸ್ಟ್ರೀಟ್, ಸೋಬರ್ಸ್ ಡ್ರೈವ್, ಕಾಲೀಸ್ ವೇ, ಹ್ಯಾಡ್ಲಿ ಸ್ಟ್ರೀಟ್, ಆಕ್ರಮ್ ವೇ ಮೊದಲಾದ ಅಂತಾರಾಷ್ಟ್ರೀಯ ಕ್ರಿಕೆಟಿಗರ ಹೆಸರುಗಳು ಈ ವಸತಿ ಪ್ರದೇಶದಲ್ಲಿ ಕಾಣಬಹುದಾಗಿದೆ.
ರಾಕ್‍ಬ್ಯಾಂಕ್‍ನ ಉಪನಗರದಲ್ಲಿರುವ ಈ ವಸತಿ ಪ್ರದೇಶವನ್ನು ಖರೀದಿ ಮಾಡಲು ಭಾರತೀಯ ಸಮುದಾಯದವರು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ಆಕೊಲೆಡ್ ಎಸ್ಟೆಟ್‍ನ
ಎಲಿಸ್ಸಾ ಹೈಸ್ ಹೇಳಿದ್ದಾರೆ. ಇನ್ನು ಈ ಪ್ರದೇಶಗಳಿಗೆ ಹೆಸರನ್ನಿಡಲು ಇಲ್ಲಿನ ಸಿಟಿ ಕೌನ್ಸಿಲ್‍ನ ಅನುಮತಿಯೂ ಬೇಕು. ಸಿಟಿ ಕೌನ್ಸಿಲ್ ಅನುಮತಿ ನೀಡಿದ ನಂತರವೇ ನಾವು ಕ್ರಿಕೆಟಿಗರ ಹೆಸರನ್ನು ಇಡಲು ಸಾಧ್ಯವಾಗಿತ್ತು ಅಂತಾರೆ ಎಲಿಸ್ಸಾ ಹೈಸ್.
ಒಟ್ಟು ನಾವು 60 ಅಂತಾರಾಷ್ಟ್ರೀಯ ಕ್ರಿಕೆಟಿಗರ ಹೆಸರನ್ನು ಸಿಟಿ ಕೌನ್ಸಿಲ್‍ನ ಅನುಮತಿಗಾಗಿ ಕೊಟ್ಟಿದ್ದೇವು. ಅದ್ರಲ್ಲಿ ಡಾನ್ ಬ್ರಾಡ್ಮನ್ ಹೆಸರು ಕೂಡ ಇತ್ತು. ಆದ್ರೆ ಬ್ರಾಡ್ಮನ್
ಹೆಸರನ್ನಿಡಲು ನಮಗೆ ಅನುಮತಿ ಸಿಗಲಿಲ್ಲ. ಯಾಕಂದ್ರೆ ಬ್ರಾಡ್ಮನ್ ಹೆಸರಿನ ಬೀದಿಯೊಂದು ಈಗಾಗಲೇ ಮೆಲ್ಬರ್ನ್ ನಲ್ಲಿದೆ. ಹಾಗಾಗಿ ನಮಗೆ ಅನುಮತಿ ಸಿಕ್ಕಿಲ್ಲ ಅಂತಾರೆ ಎಸ್ಟೆಟ್‍ನ ನಿರ್ದೇಶಕ ಕುರ್ರಾಮ್.
ಹಾಗೇ ಕುಮಾರ ಸಂಗಕ್ಕರ, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿಯವರ ಹೆಸರನ್ನಿಡಲು ಕೆಲವೊಂದು ಕಾರಣಗಳಿಂದ ಸಿಟಿ ಕೌನ್ಸಿಲ್ ಅನುಮತಿ ನೀಡಲಿಲ್ಲ. ಆದ್ರೆ ಸಚಿನ್ ಮತ್ತು ಕೊಹ್ಲಿ ಹೆಸರನ್ನಿಡಲು ನಮಗೆ ಅನುಮತಿ ಸಿಕ್ಕಿತ್ತು. ವಿರಾಟ್ ಕೊಹ್ಲಿಯಂತೂ ಸದ್ಯ ವಿಶ್ವದ ಕ್ರಿಕೆಟ್‍ನ ಜನಪ್ರಿಯ ಆಟಗಾರ. ಹಾಗೂ ನನ್ನ ನೆಚ್ಚಿನ ಆಟಗಾರಕೊಹ್ಲಿ ಹೆಸರಿನ ಸ್ಟ್ರೀಟ್ ದುಬಾರಿ ವೆಚ್ಚದ್ದಾಗಿದೆ ಎಂದು ಎಸ್ಟೆಟ್‍ನ ನಿರ್ದೇಶಕ ಕುರ್ರಾಮ್ ಹೇಳಿದ್ದಾರೆ. .








