ಸಚಿನ್ ನಡೆಯಿಂದ ಅಸೀಸ್ ನ ಮಾಜಿ ವೇಗಿ ಮೆಕ್‌ಗ್ರಾಥ್ ಅಚ್ಚರಿಗೊಂಡಿದ್ದು ಯಾಕೆ ? ಎದುರಾಳಿ ಬೌಲರ್‌ಗಳ ಮೇಲೆ ಸಚಿನ್ ಪ್ರಾಬಲ್ಯ ಸಾಧಿಸುತ್ತಿದ್ದದ್ದು ಯಾಕೆ ?
ಸಚಿನ್ ತೆಂಡುಲ್ಕರ್… ಗಾಡ್ ಆಫ್ ಕ್ರಿಕೆಟ್ ಅಂತನೇ ಫೇಮಸ್. ಅಂದ ಹಾಗೇ ಈ ಕ್ರಿಕೆಟ್ ದೇವ್ರ ಆರ್ಭಟಕ್ಕೆ ಬೇಸೆತ್ತು ಎದುರಾಳಿ ತಂಡದ ಬೌಲರ್‌ಗಳು ಸಾಕಷ್ಟು ಬಾರಿ ಕಿರಿಕಿರಿ ಮಾಡುತ್ತಿದ್ದರು. ಆದ್ರೆ ಸಚಿನ್ ತೆಂಡುಲ್ಕರ್ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಎದುರಾಳಿ ಆಟಗಾರರು ಎಷ್ಟೇ ಅಣಕಿಸಿದ್ರೂ ತಾಳ್ಮೆ ಕಳೆದುಕೊಳ್ಳದೇ ಸಚಿನ್ ಸೈಲೆಂಟಾಗಿ ಬ್ಯಾಟ್‌ನಿಂದಲೇ ಉತ್ತರ ನೀಡುತ್ತಿದ್ದರು. ಹೀಗಾಗಿ ಸಚಿನ್ ತಂಟೆಗೆ ಯಾರು ಹೆಚ್ಚಾಗಿ ಹೋಗುತ್ತಿರಲಿಲ್ಲ. ವಿಶ್ವದ ವೇಗದ ಬೌಲರ್‌ಗಳಾದ ವಾಸೀಮ್ ಅಕ್ರಮ್, ಮೆಕ್ ಗ್ರಾಥ್ ಸೇರಿದಂತೆ ಸಚಿನ್ ಯಾರನ್ನು ಬಿಟ್ಟಿಲ್ಲ. ಈ ಹಿಂದೆ ಪಾಕ್‌ನ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಕೂಡ ಸಚಿನ್ ತೆಂಡುಲ್ಕರ್‌ಗೆ ಸ್ಲಡ್ಜಿಂಗ್ ಮಾಡಿ ಮುಜುಗರ ಪಟ್ಟುಕೊಂಡಿದ್ದರು.
ಆದ್ರೆ ನೀವು ಯಾವತ್ತಾದ್ರೂ ಸಚಿನ್ ತೆಂಡುಲ್ಕರ್ ಎದುರಾಳಿ ಬೌಲರ್‌ನನ್ನು ಅಣಕಿಸಿರುವುದನ್ನು ನೋಡಿದ್ದೀರಾ ? ಬಹುಶಃ ನೋಡಿರಲು ಸಾಧ್ಯವಿಲ್ಲ. ಆದ್ರೆ ಸಚಿನ್ ಕೂಡ ಎದುರಾಳಿ ಬೌಲರ್‌ಗಳ ಜೊತೆ ಮಾತಿನ ಸಮರ ನಡೆಸಿ ಅವರಿಗೆ ಕೋಪ ಬರುವಂತೆ ಮಾಡಿ ಅವರ ಬೌಲಿಂಗ್ ಲಯವನ್ನು ತಪ್ಪಿಸುತ್ತಿದ್ರಂತೆ. ಈ ವಿಚಾರವನ್ನು ಸ್ವತಃ ಸಚಿನ್ ತೆಂಡುಲ್ಕರ್ ಹೇಳಿಕೊಂಡಿದ್ದರು.
2000ದಲ್ಲಿ ನೈರೋಬಿಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯ. ಆಸ್ಟೆçÃಲಿಯಾ ವಿರುದ್ಧ ಆ ಪಂದ್ಯದಲ್ಲಿ ಭಾರತಕ್ಕೆ ಮೊದಲು ಬ್ಯಾಟ್ ಮಾಡುವ ಅವಕಾಶ ಸಿಕ್ಕಿತ್ತು. ಆ ಪಂದ್ಯದ ಆರಂಭದಲ್ಲೇ ಸಚಿನ್ ತೆಂಡುಲ್ಕರ್ ಅವರು ಮೆಕ್ ಗ್ರಾಥ್ ಅವರನ್ನು ಸಿಟ್ಟುಗೊಳ್ಳುವಂತೆ ಮಾಡುವ ಪ್ರಯತ್ನ ಮಾಡಿದ್ದರು. ಅದಕ್ಕೆ ತಕ್ಕಂತೆ ಗಂಗೂಲಿ ಜೊತೆ ಪ್ಲಾನ್ ಕೂಡ ಮಾಡಿಕೊಂಡಿದ್ದರು. ಹೀಗಾಗಿ ಸಚಿನ್ ಮೆಕ್ ಗ್ರಾಥ್ ಜೊತೆ ಸಣ್ಣದಾಗಿ ಮಾತಿ ಸಮರ ನಡೆಸಿದ್ದರು. ಇದ್ರಿಂದ ಸಿಟ್ಟುಗೊಂಡ ಮೆಕ್ ಗ್ರಾಥ್ ಅಚ್ಚರಿ ಕೂಡ ಆಗಿದ್ದರು, ಅಲ್ಲದೆ ಔಟ್ ಸೈಡ್ ದಿ ಆಫ್ ಸ್ಟಂಪ್ ಬೌಲಿಂಗ್ ಮಾಡುವ ಬದಲು ನನ್ನ ಮೈಮೇಲೆ ತಾಗುವಂತೆಎ ಬೌನ್ಸರ್‌ಗಳನ್ನು ಎಸೆಯುತ್ತಿದ್ದರು. ನನ್ನನ್ನು ಔಟ್ ಮಾಡುವ ಬದಲು ನನ್ನ ಮೇಲೆ ಸೇಡು ತೀರಿಸುವ ಪ್ರಯತ್ನ ಮಾಡಿದ್ದರು. ಆದ್ರೆ ಇದ್ರ ಲಾಭವನ್ನು ನಾನು ಪಡೆದುಕೊಂಡೆ. ನಾನು ಗಂಗೂಲಿ ಅಂದುಕೊAಡAತೆ ಮೊದಲ ಹತ್ತು ಓವರ್‌ಗಳಲ್ಲಿ 66 ರನ್ ಗಳಿಸಿದ್ದೇವು. ಆದ್ರೆ 11.3 ಓವರ್‌ನಲ್ಲಿ ಬ್ರೇಟ್ ಎಸೆತಕ್ಕೆ ನಾನು ಔಟಾಗಿಬಿಟ್ಟೆ. 38 ಎಸೆತಗಳಲ್ಲಿ 37 ರನ್ ಗಳಿಸಿದ್ದ ನಾನು ಮೂರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿದ್ದೆ. ಮೆಕ್ ಗ್ರಾಥ್ ಈ ಪಂದ್ಯದಲ್ಲಿ ದುಬಾರಿಯಾಗಿಬಿಟ್ಟಿದ್ದರು. 9 ಓವರ್‌ಗಳಲ್ಲಿ 61 ರನ್ ನೀಡಿದ್ರು. ವಿಕೆಟ್ ಕೂಡ ಅವರಿಗೆ ಸಿಕ್ಕಿರಲಿಲ್ಲ ಎಂದು ಸಚಿನ್ ಆ ಪಂದ್ಯದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅಂತಿಮವಾಗಿ ಅ ಪಂದ್ಯವನ್ನು ಭಾರತ 2 ರನ್‌ನಿಂದ ಗೆದ್ದು ಸೆಮಿಫೈನಲ್‌ಗೆ ಎಂಟ್ರಿಯಾಗಿತ್ತು.
ಇದೇ ರೀತಿ ಮೆಕ್ ಗ್ರಾಥ್ ವಿರುದ್ಧ 2001ರ ಸರಣಿಯ ಮೊದಲ ಪಂದ್ಯದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ದೆ. ನಾನು ಲಕ್ಷö್ನಣ್ ಜೊತೆ ಬ್ಯಾಟಿಂಗ್ ಮಾಡುತ್ತಿದ್ದೆ. ಭಾರತ ಉತ್ತಮ ಸ್ಥಿತಿಯಲ್ಲೂ ಇತ್ತು. ವೇಳೆ ನಾನು ಮೆಕ್‌ಗ್ರಾಥ್ ವಿರುದ್ಧ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಲು ನಿರ್ಧಾರ ಮಾಡಿದ್ದೆ. ಆ ಒಂದು ಓವರ್ ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಅನ್ನು ಸಿಡಿಸಿದ್ದೆ. ಆದ್ರೆ ಆ ಪಂದ್ಯದಲ್ಲಿ ನಾನು 35 ರನ್ ಗಳಿಸುವಷ್ಟರಲ್ಲಿ ರನೌಟ್ ಆಗಿಬಿಟ್ಟೆ ಎಂದು ತೆಂಡುಲ್ಕರ್ ತನ್ನ ಹಳೆಯ ಪಂದ್ಯಗಳನ್ನು ನೆನಪಿಸಿಕೊಂಡ್ರು.








