ಇಬ್ಬರು ಉಗ್ರರನ್ನು ಹೊಡೆದುರುಳಿದ ಸಿಆರ್ಪಿಎಫ್ ಯೋಧರು
ಜಮ್ಮು-ಕಾಶ್ಮೀರ: ಭದ್ರಾತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಎನ್ಕೌಂಟರ್ ನಲ್ಲಿ ಇಬ್ಬರು ಉಗ್ರರರನ್ನು ಸೈನಿಕರು ಸಂಹಾರ ಮಾಡಿದ್ದಾರೆ.
ಶ್ರೀನಗರದ ಖನ್ಯಾರ್‌ನ ಬಿಶಂಬರ್ ನಗರದಲ್ಲಿ ಕಟ್ಟಡವೊಂದರಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ತಿಳಿದ ಪೊಲೀಸರು ಮತ್ತು ಸಿಆರ್ಪಿಎಫ್ ಯೋಧರು ಉಗ್ರರ ಸಂಹಾರಕ್ಕಾಗಿ ಕಾರ್ಯಾಚಾರಣೆಗೆ ಇಳಿದರು.
ಯೋಧರು ಮತ್ತ ಪೊಲೀಸರು ಕಟ್ಟಡವನ್ನು ಸುತ್ತುವರೆದಾಗ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ವೀರ ಕಲಿಗಳು ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರಳಿಸಿದ್ದಾರೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಗುಂಡಿನ ಕಾಳಗ ನಡೆದ ಈ ಪ್ರದೇಶವು ಜನ ದಟ್ಟಣೆಯಿಂದ ಕೂಡಿದೆ. ಇದು ವಾಣಿಜ್ಯ ಕೇಂದ್ರವಾದ ಲಾಲ್ಚೌಕ್ ಬಳಿ ಇದೆ ಎಂದು ವರದಿಯಾಗಿದೆ.








