ನೈಜೀರಿಯಾದ ಇಸ್ಲಾಮಿಕ್ ಸ್ಕೂಲ್ ಮೇಲೆ ಉಗ್ರರ ದಾಳಿ : 150 ವಿದ್ಯಾರ್ಥಿಗಳ ಅಪಹರಣ Terrorist
ಬೆಂಗಳೂರು : ನೈಜೀರಿಯಾದ ನೈಜೆರ್ ಪ್ರದೇಶದ ಇಸ್ಲಾಮಿಕ್ ಸ್ಕೂಲ್ ಮೇಲೆ ಉಗ್ರರು ದಾಳಿ ನಡೆಸಿ 150 ವಿದ್ಯಾರ್ಥಿಗಳನ್ನು ಅಪಹರಿಸಿದ್ದಾರೆ ಎಂದು ವರದಿಯಾಗಿದೆ.
ಶಸ್ತ್ರಧಾರಿ ಗನ್ ಮ್ಯಾನ್ ಗಳು ಶಾಲೆಯ ಮೇಲೆ ದಾಳಿ ನಡೆಸಿ ಸುಮಾರು 150 ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ನೈಜೆರ್ ಸರ್ಕಾರ ತಿಳಿಸಿದೆ.
ಭಾನುವಾರ ಸಂಜೆ 3.30ರ ಸುಮಾರಿಗೆ ಬೈಕ್ ಗಳಲ್ಲಿ ಬಂದ ಗನ್ ಮ್ಯಾನ್ ಗಳು ಶಾಲೆಯ ಮೇಲೆ ದಾಳಿ ನಡೆಸಿದ್ದು, ಬಳಿಕ ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಿದ್ದಾರೆ.
ಶಾಲೆಯ ಶಿಕ್ಷಕರ ಕಣ್ಣೆದುರೇ ಈ ಘಟನೆ ನಡೆದಿದೆ ಎಂದು ಘಟನೆ ಬಗ್ಗೆ ನೈಜೆರ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.