ಗಣರಾಜ್ಯೋತ್ಸದಂದು ದಾಳಿ ಎಚ್ಚರಿಕೆ – ರಾಜಧಾನಿ ಹೈ ಅಲರ್ಟ್
ಗಣರಾಜ್ಯೋತ್ಸವ ಪರೇಡ್ ವೇಳೆ ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಬಹುದು. ಐಬಿ ಮಂಗಳವಾರ ಎಚ್ಚರಿಕೆ ನೀಡಿದ್ದು, ಉಗ್ರರು ಗುಂಪನ್ನು ಗುರಿಯಾಗಿಸಬಹುದು ಎಂದು ಹೇಳಿದೆ. ಐಬಿ ನಿಷೇಧಿತ ಸಂಘಟನೆಗೆ ಖಲಿಸ್ತಾನಿ ಲಿಬರೇಶನ್ ಫೋರ್ಸ್ ಎಂದು ಹೆಸರಿಸಿದೆ ಮತ್ತು ಈ ಸಂಘಟನೆಯು ದಾಳಿ ನಡೆಸಬಹುದು ಎಂದು ಹೇಳಿದೆ.
ಗಾಜಿಪುರದಲ್ಲಿ ವಶಪಡಿಸಿಕೊಂಡಿದ್ದ ಐಎಡಿ ಬಾಂಬ್ ಗಳು ಪಾಕಿಸ್ತಾನದ ಮುಲದವು ಎಂದು ಗುರುತಿಸಲಾಗಿದೆ. IED ಅಮೋನಿಯಂ ನೈಟ್ರೇಟ್, RDX, ಒಂಬತ್ತು-ವೋಲ್ಟ್ ಬ್ಯಾಟರಿ ಮತ್ತು ಕಬ್ಬಿಣದ ಸಣ್ಣ ತುಂಡುಗಳನ್ನು ಒಳಗೊಂಡಿರುವ ಸ್ಪೋಟಕಗಳನ್ನ ವಶಪಡಿಸಿಕೊಳ್ಳಲಾಗಿದೆ. ಭದ್ರತಾ ಪಡೆಗಳು ಸುಮಾರು 3 ಕೆಜಿ ಸ್ಫೋಟಕಗಳನ್ನು ನಾಶಪಡಿಸಿದವು ಮತ್ತು ಉಳಿದವುಗಳನ್ನು ತನಿಖೆಗಾಗಿ ಹರಿಯಾಣದ ಮನೇಸರ್‌ನಲ್ಲಿರುವ ರಾಷ್ಟ್ರೀಯ ಬಾಂಬ್ ಡೇಟಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ದೇಶದಲ್ಲಿ ಕೋಮು ಉದ್ವಿಗ್ನತೆಯನ್ನ ಹರಡುವುದಕ್ಕಾಗಿ ಮಾದಕ ವಸ್ತುಗಳ ಹಣದದ ಮೂಲಕ ನಿರಂತರವಾಗಿ ಐಇಡಿಗಳನ್ನ ರವಾನೆ ಮಾಡುತ್ತಿದ್ದಾರೆ ಎಂದು ಭದ್ರತಾ ಏಜೆನ್ಸಿಗಳು ತಿಳಿಸಿವೆ.








