ಕೊರೊನಾ ಹಾವಳಿಯಿಂದ ಇಡೀ ವಿಶ್ವವೇ ತತ್ತರಿಸಿಹೋಗಿರುವ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇರಾನ್ ಮತ್ತು ಸಿರಿಯಾದಲ್ಲಿ 10 ಸಾವಿರಕ್ಕೂ ಹೆಚ್ಚು ಇಸ್ಲಾಮಿಕ್ಸ್ಟೇಟ್ ಉಗ್ರರು ಸಕ್ರಿಯರಾಗಿದ್ದಾರೆ. ಎಂದು ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಇಲಾಖೆ ಮುಖ್ಯಸ್ಥ ವ್ಲಾದಿಮಿರ್ ವೊರೊನ್ಕೊವ್ ತಿಳಿಸಿದ್ದಾರೆ. ಅಲ್ಲದೇ ಈ ವರ್ಷ ಉಗ್ರ ದಾಳಿಗಳು ಹೆಚ್ಚಾಗಿರುವುದು ಈ ಮಾಹಿತಿಗೆ ಪುರಾವೆ ನಿಡಿದಂತಾಗಿದೆ.

ಇನ್ನೂ ಇದೇ ವಿಚಾರವಾಗಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ವಿವರಿಸಿರುವ ವ್ಲಾದಿಮಿರ್ ಅವರು ಐಎಸ್ ಉಗ್ರರು ಒಂದು ರಾಷ್ಟ್ರದಿಂದ ಇನ್ನೊಂದು ದೇಶಕ್ಕೆ ಸಣ್ಣ ಗುಂಪುಗಳಲ್ಲಿ ಸುಲಭವಾಗಿ ಪ್ರಯಾಣಿಸುತ್ತಿದ್ದಾರೆ. ಮತ್ತೊಂದು ವಿಚಾರವೆಂದರೆ ಉಗ್ರರ ದಾಳಿ ಕೇವಲ ಇರಾಕ್ ಮತ್ತು ಸಿರಿಯಾ ಮಾತ್ರವೇ ಸೀಮಿತವಾಗಿಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಇದರ ಜೊತೆಗೆ ಸಮಾಧಾನಕರ ಸಂಗತಿಯೊಂದನ್ನು ತಿಳಿಸಿರುವ ವ್ಲಾದಿಮಿರ್ ಅವರು ಕೊರೊನಾ ಹಾವಳಿಯಿಂದಾಗಿ ಹಲವು ದೇಶಗಳಲ್ಲಿ ಹೇರಲಾರಿರುವ ಲಾಕ್ ಡೌನ್ ಪರಿಣಾಮ ದಾಳಿಗಳ ಪ್ರಮಾಣ ಕಡಿಮೆಯಾಗಿದೆ ಅಲ್ಲದೇ , ಉಗ್ರರ ಸಂಚಾರಕ್ಕೂ ಕಡಿವಾನ ಬಿದ್ದಿದೆ ಎಂದಿದ್ದಾರೆ. ಇದರ ಜೊತೆಗೆ ಸಲಹೆ ನಿಡಿರುವ ಅವರು ಈ ಸಮಯ ಸೂಕ್ತವಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಂಡು ಉಗ್ರ ಸಂಘಟನೆಗಳ ಹೆಡೆಮುರಿಕಟ್ಟಬೇಕಿದೆ ಎಂದು ಅಭಿಪ್ರಯಾ ಪಟ್ಟಿದ್ದಾರೆ. 








