Test Ranking : ಸರಣಿ ಗೆದ್ದು ಎರಡನೆ ಸ್ಥಾನಕ್ಕೇರಿದ ಟೀಮ್ ಇಂಡಿಯಾ…
ಬಾಂಗ್ಲಾದೇಶದ ವಿರುದ್ಧ ಎರಡನೆ ಟೆಸ್ಟ್ ಗೆಲುವಿನ ಬೆನ್ನಲ್ಲೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರಾಂಕಿಂಗ್ ನಲ್ಲಿ 2 ನೇ ಸ್ಥಾನಕ್ಕೇರಿದೆ. ಮೀರ್ ಪುರ್ ನಲ್ಲಿ ನಡೆದ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಟೀಮ್ ಇಂಡಿಯಾ 3 ವಿಕೆಟ್ ಗಳ ಗೆಲುವು ದಾಖಲಿಸಿ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು.
ಟೆಸ್ಟ್ ಆರಂಭಕ್ಕೂ ಮುನ್ನ ಭಾರತ ವಿಶ್ವ ಟೆಸ್ಟ್ ರಾಂಕಿಂಗ್ನಲ್ಲಿ ಶೇ.55.77 ಅಂಕಗಳೊಂದಿಗೆ ಪಡೆದಿತ್ತು. ದಕ್ಷಿಣ ಆಫ್ರಿಕಾ ತಂಡ 54.55 ಅಂಕಗಳನ್ನು ಪಡೆದಿದೆ. ಒಂದು ವೇಳೆ ಮೀರ್ ಪುರ್ ಟೆಸ್ಟ್ ಪಂದ್ಯವನ್ನು ಸೋತಿದ್ದರೆ ದ.ಆಫ್ರಿಕಾ ತಂಡ ಎರಡನೆ ಸ್ಥಾನಕ್ಕೇರುತ್ತಿತ್ತು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 14 ಪಂದ್ಯಗಳಿಂದ 8 ಪಂದ್ಯಗಳನ್ನು ಗೆದ್ದು 99 ಅಂಕಗಳೊಂದಿಗೆ 58.93 ಶೇಕಡವಾರು ಅಂಕಗಳನ್ನು ಪಡೆದಿದೆ. ಡಿ.26ರಿಂದ ಆಸ್ಟ್ರೇಲಿಯಾ ವಿರುದ್ಧ ಎಂಸಿಜೆ ಮೈದಾನದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಆಡಲಿರುವ ದ.ಆಫ್ರಿಕಾ ತಂಡ ಒತ್ತಡದಲ್ಲಿ ಸಿಲುಕಿದೆ.
ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ 76.92ಶೇ. ಅಂಕಗಳನ್ನು ಪಡೆದು ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ 13 ಪಂದ್ಯಗಳಿಂದ ಕೇವಲ 1 ಪಂದ್ಯವನ್ನು ಮಾತ್ರ ಸೋತಿದೆ.
Test Ranking: Team India, who won the series and placed second in the ranking…