ಭಾರತೀಯ ಮಹಿಳೆ ಮೇಲೆ ಜನಾಂಗೀಯ ದಾಳಿ, ಹಲ್ಲೆ – ಅಮೆರಿಕನ್ ಮಹಿಳೆ ಬಂಧನ
ಅಮೆರಿಕದ ಟೆಕ್ಸಾಸ್ ನಲ್ಲಿ ಭಾರತೀಯ-ಅಮೆರಿಕನ್ ಮಹಿಳೆಯರ ಮೇಲೆ ಜನಾಂಗೀಯ ದಾಳಿ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ಲಾನೋ ಡೌನ್ ಟೌನ್ನಲ್ಲಿರುವ ಸಿಕ್ಸ್ಟಿ ವೈನ್ಸ್ ರೆಸ್ಟೋರೆಂಟ್ನ ಹೊರಗೆ ನಾಲ್ಕು ಮಹಿಳೆಯರು ಭಾರತೀಯ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅದೇ ಸಮಯದಲ್ಲಿ, ಮೆಕ್ಸಿಕನ್-ಅಮೆರಿಕನ್ ಮೂಲದ ಮಹಿಳೆಯೊಬ್ಬರು ಅವರ ಮೇಲೆ ಜನಾಂಗೀಯ ಟೀಕೆ ಮತ್ತು ನಿಂದನೆಗಳನ್ನೂ ಮಾಡಿದ್ದಾರೆ. ಭಾರತೀಯ ಮಹಿಳೆಗೆ ಕಪಾಳಮೋಕ್ಷ ಕೂಡ ಮಾಡಿದ್ದಾಳೆ. ಘಟನೆ ಆಗಸ್ಟ್ 24 ರಂದು ನಡೆದಿದ್ದು, ಮಹಿಳೆಯನ್ನು ಬಂಧಿಸಲಾಗಿದೆ.
ನಿಮ್ಮಿಂದಾಗಿ ದೇಶದಲ್ಲಿ ವಿನಾಶವಾಗಿದೆ…
ಭಾರತೀಯ ಮಹಿಳೆಯೊಬ್ಬರು ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಅಮೆರಿಕಾ ಮಹಿಳೆ, ಭಾರತೀಯ ಮಹಿಳೆಯರ ಗುಂಪಿಗೆ, ನಾನು ನಿಮ್ಮನ್ನು ಭಾರತೀಯರನ್ನು ದ್ವೇಷಿಸುತ್ತೇನೆ. ಈ ದೇಶದಲ್ಲಿ ನೀವೆ ತುಂಬಿದ್ದೀರಿ. ನೀವು ಉತ್ತಮ ಜೀವನ ಬಯಸಿ ಇಲ್ಲಿಗೆ ಬಂದಿದ್ದೀರಿ. ನಿಮ್ಮಂಥಹ ಜನರಿಂದ ದೇಶ ಹಾಳಾಗುತ್ತಿದೆ. ನೀವು ಭಾರತಕ್ಕೆ ಹಿಂತಿರುಗಿ ಈ ದೇಶಕ್ಕೆ ನಿಮ್ಮ ಅವಶ್ಯಕತೆ ಇಲ್ಲ ಎಂದಿದ್ದಾರೆ. ಭಾರತೀಯ ಮಹಿಳೆಯರ ಮೇಲೆ ದಾಳಿ ಮಾಡಿದ ಮೆಕ್ಸಿಕನ್-ಅಮೆರಿಕನ್ ಮಹಿಳೆ.
Mexican-American female arrested after racist attack on four Indian women
Authorities said the woman, identified as Esmeralda Upton, is also being investigated for hate crime, and additional charges may be forthcoming.
Read: https://t.co/FTD4FTYYUt pic.twitter.com/VzYYKN1TZA
— The Times Of India (@timesofindia) August 26, 2022
ದಾಳಿ ಮಾಡಿದ ಮೆಕ್ಸಿಕನ್-ಅಮೆರಿಕನ್ ಮಹಿಳೆ.
ಈಕೆಯ ಹೇಳಿಕೆಗೆ ಭಾರತೀಯ ಮಹಿಳೆಯರು ಪ್ರತಿಕ್ರಿಯಿಸಿದಾಗ, ಆರೋಪಿ, ಮಹಿಳೆಯೊಬ್ಬಳ ಮೇಲೆ ಹಲ್ಲೆ ಮಾಡಿದ್ದಾರೆ. ಭಾರತೀಯ ಮಹಿಳೆ ಈ ವೀಡಿಯೋವನ್ನ ಹಂಚಿಕೊಂಡಿದ್ದಾರೆ. ಸ್ನೇಹಿತರೊಂದಿಗಿನ ಡಿನ್ನರ್ ಭಯಾನಕ ಅನುಭವದೊಂದಿಗೆ ಕೊನೆಯಾಯಿತು. ನಾವು ರೆಸ್ಟೋರೆಂಟ್ ನಿಂದ ಹೊರಟು ನಮ್ಮ ಕಾರಿನ ಕಡೆ ಹೋಗುತ್ತಿದ್ದಾಗ ಒಬ್ಬ ಕುಡುಕ ಮಹಿಳೆ ನಮ್ಮ ಬಳಿ ಬಂದು ಜನಾಂಗೀಯ ನಿಂದನೆ ಮಾಡಿದರು. ಮತ್ತು ನಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು ಎಂದು ವಿಡಿಯೋ ಜೊತೆ ಬರೆದುಕೊಂಡಿದ್ದಾರೆ.
ವಿಡಿಯೋ ವೈರಲ್ ಆದ ತಕ್ಷಣ ಆರೋಪಿ ಮಹಿಳೆಯನ್ನು ಬಂಧನ
ಆಗಸ್ಟ್ 24 ರಂದು ನಡೆದ ಘಟನೆಯ ವಿಡಿಯೋ ವೈರಲ್ ಆದ ನಂತರ ಪ್ಲಾನೋ ಪೊಲೀಸರು ಆರೋಪಿ ಮಹಿಳೆಯನ್ನು ಆಗಸ್ಟ್ 25 ರಂದು ಬಂಧಿಸಿದ್ದಾರೆ. ಮಹಿಳೆ ವಿರುದ್ಧ ಹಲ್ಲೆ ಹಾಗೂ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಆರೋಪಿ ಮಹಿಳೆಯನ್ನು ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದೆ. ಜಾಮೀನಿಗಾಗಿ ಅವರು $10,000 ಬಾಂಡ್ ಪಾವತಿಸಬೇಕಾಗುತ್ತದೆ. ಈ ಬಗ್ಗೆ ಪ್ಲಾನೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.