ಥೈಲ್ಯಾಂಡ್ ನಲ್ಲಿ ಕೋವಿಡ್ ಸಂಕಷ್ಟ – ಲಸಿಕೆ, ವೆಂಟಿಲೇಟರ್ , ಆಕ್ಸಿಜನ್ ಕೊರತೆ
ಥಾಯ್ಲೆಂಡ್ ನಲ್ಲಿ ಕೋವಿಡ್ ಅಲೆ ಹೆಚ್ಚಾಗ್ತಿದ್ದು, ಜನರು ಸಂಕಷ್ಕ್ಕೆ ಸಿಲುಕಿದ್ದಾರೆ.. ದಿನೇ ದಿನೇ ಸೋಂಕಿತರ ಪ್ರಮಾಣ ಹೆಚ್ಚಾಗ್ತಿದೆ.. ಈ ನಡುವೆ ವೆಂಟಿಲೇಟರ್, ಲಸಿಕೆ, ಐಸಿಯು, ಆಕ್ಸಿಜನ್ ಕೊರತೆ ಉಂಟಾಗಿದೆ. ಇದ್ರಿಂದಾಗಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗ್ತಿಲ್ಲ.. ಲಸಿಕೆ ಪೂರೈಕೆಯಲ್ಲಿಯೂ ವ್ಯತ್ಯಯವಾಗಿರುವ ಕಾರಣ, ದೇಶದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿವೆ.
ಉತ್ತರಾಖಂಡ್ ಸಿಎಂ ತಿರಥ್ ಸಿಂಗ್ ರಾವತ್ ರಾಜೀನಾಮೆ
ಇನ್ನೂ ಹೊಸದಾಗಿ 6,200 ಪ್ರಕರಣಗಳು ವರದಿಯಾಗಿದ್ದು, ಸತತ 3ನೇ ದಿನವೂ ದಾಖಲೆ ಪ್ರಮಾಣದಲ್ಲಿ ಸೋಂಕಿನ ಪ್ರಕರಣಗಳು ಕಂಡುಬಂದಿವೆ. ಕಳೆದ ಎರಡು ವಾರಗಳಿಂದ ತೀವ್ರ ನಿಗಾ ಘಟಕ ಮತ್ತು ವೆಂಟಿಲೇಟರ್ಗಳ ಕೊರತೆ ಕಂಡುಬಂದಿದೆ. ದೇಶದಾದ್ಯಂತ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಈ ವರೆಗೆ ಕೋವಿಡ್ನಿಂದ 41 ಮಂದಿ ಸಾವನ್ನಪ್ಪಿದ್ದಾರೆ, ಒಟ್ಟು ಸಾವಿನ ಸಂಖ್ಯೆ 2,181ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ರಿಪೋರ್ಟ್ : ನಿನ್ನೆ 44,111 ಜನರಲ್ಲಿ ಸೋಂಕು ಪತ್ತೆ
ಥಾಯ್ಲೆಂಡ್ನ ಶೇ 90ರಷ್ಟು ಭಾಗದಲ್ಲಿ ಏಪ್ರಿಲ್ ಆರಂಭದಲ್ಲಿ 2,71,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಈವರೆಗೆ ಕೋವಿಡ್ನಿಂದ ಸಂಭವಿಸಿರುವ ಸಾವಿನ ಪ್ರಕರಣಗಳಲ್ಲಿ ಶೇ 95 ರಷ್ಟು ಏಪ್ರಿಲ್ ತಿಂಗಳಲ್ಲೇ ದಾಖಲಾಗಿವೆ. ಜೂನ್ನಲ್ಲಿ 992 ಸಾವು ಸಂಭವಿಸಿವೆ.