Thalaivi
ಬಾಲಿವುಡ್ ನ ಡೇರಿಂಗ್ ನಟಿ ಕಂಗನಾ ಸದ್ಯ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಬಯೋಪಿಕ್ ಸಿನಿಮಾ ‘ತಲೈವಿ’ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಈ ಚಿತ್ರ ದಿನದಿಂದ ದಿನಕ್ಕೆ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಲೇ ಇದೆ. ಇದೀಗ
ಚಿತ್ರದಲ್ಲಿ ಈಗಾಗಲೇ ದೊಡ್ಡ ದೊಡ್ಡ ಸ್ಟಾರ್ ಗಳು ಬಣ್ಣ ಹಚ್ಚುತ್ತಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಈಗ ಮತ್ತೊಬ್ಬ ಸ್ಟಾರ್ ನಟಿ ತಲೈವಿ’ಗೆ ಎಂಟ್ರಿಯಾಗಿದ್ದಾರೆ.
ರೋಜಾ ಖ್ಯಾತಿಯ ನಟಿ ಮಧು ಅವರು ಈ ಸಿನಿಮಾಗೆ ಎಂಟ್ರಿಕೊಟ್ಟಿದ್ದಾರೆ. ಇವರು
ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟಿ ”ನಾನು ಜಾನಕಿಯಮ್ಮ ಅವರನ್ನು ಭೇಟಿ ಮಾಡಿಲ್ಲ, ಆದ್ರೆ, ಜಯಲಲಿತಾ ಅವರನ್ನು ಭೇಟಿ ಮಾಡಿದ್ದೇನೆ.
ರೋಜಾ ಸಿನಿಮಾದ ನಟನೆಗಾಗಿ ಅವರ ಕೈಯಿಂದ ರಾಜ್ಯ ಪ್ರಶಸ್ತಿ ಪಡೆದಿದ್ದೆ.
ವೇದಿಕೆಯಲ್ಲಿ ಪ್ರಶಸ್ತಿ ನೀಡಿದ ಸಿಎಂ ”ರೋಜಾ” ಚಿತ್ರದಲ್ಲಿ ನಿನ್ನ ನಟನೆ ಇಷ್ಟ ಆಯ್ತು ಎಂದಿದ್ದರು” ಎಂಬ ತಮ್ಮ ಸ್ಮರಣೀಯ ಅನುಭವವನ್ನ ಹಂಚಿಕೊಂಡಿದ್ದಾರೆ.
ದರ್ಶನ್ ಅಭಿನಯದ “ಕಲಾಸಿಪಾಳ್ಯ” ತೆರೆಕಂಡು ಇಂದಿಗೆ 16 ವರ್ಷ..!
ಎಎಲ್ ವಿಜಯ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರ ತಮಿಳು, ಹಿಂದಿ, ತೆಲುಗು ಭಾಷೆಯಲ್ಲಿ ತೆರೆಕಾಣಲಿದೆ.
ಇನ್ನೂ ಎಂಜಿಆರ್ ಪಾತ್ರದಲ್ಲಿ ತಮಿಳು ನಟ ಅರವಿಂದ್ ಸ್ವಾಮಿ ಅವರು ನಟಿಸುತ್ತಿದ್ದಾರೆ.
ಇನ್ನೂ ಈ ಚಿತ್ರದಲ್ಲಿ ಮಾಜಿ ಸಿಎಂ ಕರುಣಾನಿಧಿ, ಶಶಿಕಲಾ, ಶೋಭನ್ ಬಾಬು ಪಾತ್ರಗಳು ಸಹ ಇರಲಿದೆ.
ಕರುಣಾನಿಧಿ ಪಾತ್ರದಲ್ಲಿ ಪ್ರಕಾಶ್ ರೈ ಕಾಣಿಸಿಕೊಳ್ಳಲಿದ್ದಾರೆ.
ಶೋಭನ್ ಬಾಬು ಪಾತ್ರದಲ್ಲಿ ಜಿಶು ಸೇನಾಗುಪ್ತಾ ಅಭಿನಯಿಸಲಿದ್ದಾರೆ. ಶಶಿಕಲಾ ಪಾತ್ರದಲ್ಲಿ ಪೂರ್ಣ ನಟಿಸಲಿದ್ದಾರೆ.
Thalaivi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








