ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ 12 ವರ್ಷಗಳ ನಂತರ ಕುಟುಂಬದೊಂದಿಗೆ ಸೇರಿಕೊಂಡ ಯುವಕ
ಕಳೆದ 12 ವರ್ಷಗಳ ಹಿಂದೆ ಮನೆ ಬಿಟ್ಟು ಉಡುಪಿಯಲ್ಲಿ ಅಲೆಮಾರಿಯಾಗಿ ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಇದೀಗ ಮತ್ತೆ ತನ್ನ ಕುಟುಂಬದೊಂದಿಗೆ ಸೇರಿಕೊಂಡಿದ್ದಾರೆ.
ಕುಂದಾಪುರ ತಾಲ್ಲೂಕಿನ ವಕ್ವಾಡಿ ತೆಂಕಬೆಟ್ಟುವಿನ ಪ್ರಶಾಂತ್ ಶೆಟ್ಟಿ (37) ಅವರು 25 ವರ್ಷದವರಾಗಿದ್ದಾಗ ಮನೆ ಬಿಟ್ಟು ಹೋಗಿದ್ದರು. ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ಇದೀಗ ಅವರು ಮನೆ ಸೇರಿದ್ದಾರೆ.

ಅವರು ಕಾಸರಗೋಡಿನ ಹೋಟೆಲ್‌ಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು. ಕಳೆದ ಮೂರು ವರ್ಷಗಳಿಂದ, ಅವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವ ಪ್ರವಾಸಿಗರಿಂದ ಭಿಕ್ಷೆ ಯಾಚಿಸುತ್ತಿದ್ದರು ಮತ್ತು ರಾತ್ರಿಯ ಸಮಯವನ್ನು ಬಸ್ ನಿಲ್ದಾಣಗಳಲ್ಲಿ ಅಥವಾ ಅಂಗಡಿಗಳ ಹೊರಗೆ ವರಾಂಡಾಗಳಲ್ಲಿ ಕಳೆಯುತ್ತಿದ್ದರು.
ಉಡುಪಿ ಜಿಲ್ಲೆಯ ನಾಗರಿಕ ಸಮಿತಿಯ ಸದಸ್ಯರು ಯುವಕನೊಂದಿಗೆ ಮಾತನಾಡಿ, ಭಿಕ್ಷಾಟನೆ ನಿಷೇಧದ ಬಗ್ಗೆ ಮತ್ತು ಅದು ಅಪರಾಧವೆಂದು ಮನವರಿಕೆ ಮಾಡಿದರು.
ಆದರೆ ಪ್ರಶಾಂತ್ ಗೆ ತಾನು ಕುಂದಾಪುರದವನು ಎಂಬುದನ್ನು ಹೊರತುಪಡಿಸಿ ತನ್ನ ಮನೆಯ ಬಗ್ಗೆ ಅಥವಾ ಕುಟುಂಬದ ವಿಳಾಸದ ಬಗ್ಗೆ ತಿಳಿದಿರಲಿಲ್ಲ. ಅವರ ಫೋಟೋವನ್ನು ಕುಂದಾಪುರದ ಸಾಮಾಜಿಕ ಕಾರ್ಯಕರ್ತರಿಗೆ ಸಹಾಯದ ಕೋರಿಕೆಯೊಂದಿಗೆ ನೀಡಲಾಯಿತು. ಅಂಬಿಕಾ ಎಂಬ ವಕ್ವಾಡಿಯ ಸಮಾಜ ಸೇವಕಿ ಅವರನ್ನು ಗುರುತಿಸಿ ತಾಯಿಯೊಂದಿಗೆ ಮತ್ತೆ ಒಂದಾಗಲು ಸಹಾಯ ಮಾಡಿದರು.
ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ವಕ್ವಾಡಿಯ ಸಾಮಾಜಿಕ ಕಾರ್ಯಕರ್ತೆ ಅಂಬಿಕಾ ಅವರ ಸಹಕಾರದಿಂದ ಪ್ರಶಾಂತ್ ತಾಯಿಯ ಮಡಿಲಿಗೆ ಸೇರಿದ್ದಾರೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1420572810108342279?s=19
https://twitter.com/SaakshaTv/status/1419863151969980422?s=19
https://twitter.com/SaakshaTv/status/1420180351285145604?s=19
https://twitter.com/SaakshaTv/status/1420226067181326337?s=19
#socialactivists








