ಆಂಧ್ರ ಪ್ರದೇಶ : ಮದ್ಯ ಸಿಗಲಿಲ್ಲ ಎಂದು ಸ್ಯಾನಿಟೈಸರ್ ಕುಡಿದು 9 ಮಂದಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಶ್ರೀನು ಬೋಯಾ (25), ಭೋಗೆಮ್ ತಿರುಪಥಾಯ (37), ಗುಂಟಕಾ ರಾಮಿರೆಡ್ಡಿ (60), ಕೆ. ರಾಮಣಯ್ಯ (30), ಕೋನಗಿರಿ ರಾಮಣಯ್ಯ (65) ಮತ್ತು ರಾಜರೆಡ್ಡಿ (65) ಎಂದು ಗುರುತಿಸಲಾಗಿದೆ. ಉಳಿದವರ ಕುರಿತು ಇನ್ನೂ ಮಾಹಿತಿ ಸಿಕ್ಕಿಲ್ಲ.
ಮೃತರಲ್ಲಿ ಭಿಕ್ಷುಕರು ಹಾಗೂ ಸ್ಥಳೀಯರು ಸೇರಿದ್ದು, ಮೂವರು ನಿನ್ನೆ ರಾತ್ರಿ, ಇಂದು ಬೆಳಗ್ಗೆ ಆರು ಜನರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಮದ್ಯ ವ್ಯಸನಿಗಳಾಗಿದ್ದು, ಬಾರ್ ಗಳು ಕ್ಲೋಸ್ ಆಗಿರುವ ಕಾರಣ ಪ್ರತಿನಿತ್ಯ ಸ್ಯಾನಿಟೈಸರ್ ಕುಡಿಯುತ್ತಿದ್ದರು ಎನ್ನಲಾಗಿದೆ.