ನಟ ಫಹಾದ್ ಫಾಸಿಲ್ ತಮಗಿರುವ ವಿಚಿತ್ರ ಕಾಯಿಲೆ ಕುರಿತು ಮಾತನಾಡಿದ್ದಾರೆ.
ಫಹಾದ್ ಆವೇಶಂ’ ಸಿನಿಮಾದ ಮೂಲಕ ಭಾರೀ ಹೆಸರು ಮಾಡಿದ್ದಾರೆ. ಈ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಮಧ್ಯೆ ಸಂದರ್ಶನವೊಂದರಲ್ಲಿ ತಮಗಿರುವ ರೋಗದ ಕುರಿತು ಮಾತನಾಡಿದ್ದಾರೆ.
ADHD ಎಂಬ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ. ನರಕ್ಕೆ ಸಂಬಂಧಿಸಿದ ರೋಗವದು. ಇದು ಮಿದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಇದು ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆ. ಆದರೆ, ದೊಡ್ಡವರಿಗೆ ಈ ರೋಗದಿಂದ ತೊಂದರೆ ಉಂಟಾಗುತ್ತದೆ ಎಂದು ನಟ ಹೇಳಿದ್ದಾರೆ. ಚಿಕ್ಕವಯಸ್ಸಿನಲ್ಲಿ ಇದು ಕಾಣಿಸಿಕೊಂಡರೆ ವಾಸಿಯಾಗಬಹುದು. ಇದು ನನಗೆ 41ನೇ ವಯಸ್ಸಿನಲ್ಲಿ ಪತ್ತೆಯಾಗಿದೆ. ಇದು ಸದ್ಯದ ವಯಸ್ಸಿನಲ್ಲಿ ಗುಣಮುಖವಾಗುವುದು ಕಡಿಮೆ ಎಂದು ಹೇಳಿದ್ದಾರೆ. ಸದ್ಯ ನಟ ಪುಷ್ಪ 2 ಚಿತ್ರದಲ್ಲಿ ನಟಿಸಿದ್ದಾರೆ.