ಬೆಂಗಳೂರು : ನಗರದ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಕೆ.ಜಿ.ಎಸ್. ವಾರ್ಡ್ ಸಂಖ್ಯೆ 125ರಲ್ಲಿ 6 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಾಜಿ ಕೇಂದ್ರ ಸಚಿವ ದಿ. ಅನಂತಕುಮಾರ್ ಕ್ರೀಡಾ ಸಂಕೀರ್ಣ ಕಟ್ಟಡ, 1.05 ಕೋಟಿ ವೆಚ್ಚದ ವಿವಿಧೋದ್ದೇಶ ಕಟ್ಟಡ ಸಂಕೀರ್ಣ, ಮಾರೇನಹಳ್ಳಿ ವಾರ್ಡ್ನಲ್ಲಿ 2.90ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಕ್ರೀಡಾ ಸಂಕೀರ್ಣ ಹಾಗೂ ನಚಿಕೇತ ಉದ್ಯಾನವನವನ್ನು ವಸತಿ ಸಚಿವ ವಿ ಸೋಮಣ್ಣ ಅವರು ಉದ್ಘಾಟಿಸಿದರು.
ದಿ, ಅನಂತ್ ಕುಮಾರ್ ಸ್ಮಾರಕವಾಗಿ ನಿರ್ಮಾಣಗೊಂಡಿರುವ ಕ್ರೀಡಾ ಸಂಕಿರ್ಣವನ್ನು ವಸತಿ ಸಚಿವ ವಿ. ಸೋಮಣ್ಣ ಅವರು ಶಟಲ್ ಬ್ಯಾಡ್ಮಿಂಟನ್ ಆಡುವ ಮೂಲಕ ಚಾಲನೆ ನೀಡಿದ್ರು.
ಬಿಬಿಎಂಪಿ ಹಾಗೂ ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆಯಡಿಯಲ್ಲಿ ಈ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಅನಂತ್ ಕುಮಾರ್ ಕ್ರೀಡಾ ಸಂಕೀರ್ಣ ಸುಮಾರು 440.00 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಇದರ ನೆಲ ಮಹಡಿಯಲ್ಲಿ ಕೆಜಿಎಸ್ ಗ್ರಂಥಾಲಯ, ಯೋಗ ಶಾಲೆ ಇದೆ. ಮೊದಲ ಮಹಡಿಯಲ್ಲಿ ಆತ್ಯಾಧುನಿಕ ಮಾದರಿಯ ವ್ಯಾಯಾಮ ಶಾಲೆ ಹಾಗೂ ಎರಡನೇ ಮಹಡಿಯಲ್ಲಿ ಶಟ್ಲ್ ಬ್ಯಾಡ್ಮಿಂಟನ್ ಕೋರ್ಟ್ ಇದೆ. ಹಾಗೇ
ಇನ್ನು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಕ್ರೀಡಾ ಸಂಕೀರ್ಣದಲ್ಲಿ ಹೊರಾಂಗಣ ವ್ಯಾಯಮ ಸೌಲಭ್ಯಗಳು, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಸೇರಿದಂತೆ ಇನ್ನಿತರ ಒಳಾಂಗಣ ಕ್ರೀಡೆಗಳ ಸವಲತ್ತುಗಳಿವೆ. ಪಾಲಿಕೆ ಸದಸ್ಯೆ ಮಧುಕುಮಾರಿ ವಾಗೀಶ್, ಅರುಣ್ ಸೋಮಣ್ಣ, ವಾಗೀಶ್, ಮೋಹನ್, ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತಿರಿದ್ದರು.
ಇದಕ್ಕೂ ಮೊದಲು ಅಂದ್ರೆ ಬೆಳಗ್ಗೆ ಗೋವಿಂದರಾಜನಗರ ಕ್ಷೇತ್ರದ ಡಾ. ರಾಜ್ ಕುಮಾರ್ ವಾರ್ಡ್ ಸಂಖ್ಯೆ 106ರ ವ್ಯಾಪ್ತಿಯಲ್ಲಿಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಕಟ್ಟಡ ಕಾಮಗಾರಿಗೆ ಸಚಿವರು ಭೂಮಿ ನೇರವೆರಿಸಿದ್ರು. ಈ ಶಾಲಾ ಕಟ್ಟಡ ಅಂದಾಜು ವೆಚ್ಚ 12 ಕೋಟಿ ಆಗಿದೆ.
ಭೂಮಿಪೂಜೆ ಕಾರ್ಯಕ್ರಮದಲ್ಲಿ ಎಂಎಲ್ಸಿ ಅ. ದೇವೇಗೌಡರು, ಬಿಬಿಎಂಪಿ ಸದಸ್ಯರಾದ ರೂಪ .ಆರ್.ಮೋಹನ್ ಕುಮಾರ್, ವಾಗೀಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.