ಬಳ್ಳಾರಿ : ತೊಗಲು ಗೊಂಬೆ ಆಟದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಹತ್ತಿರದ ತಳಕು ಹತ್ತಿರ ಈ ಘಟನೆ ನಡೆದಿದೆ. ವೀರಣ್ಣ ಅವರು, ತೊಗಲು ಗೊಂಬೆ ಆಟದ ಮೂಲಕ ರಾಜ್ಯ, ದೇಶ ಅಷ್ಟೇ ಅಲ್ಲದೇ, ವಿದೇಶಗಳಲ್ಲಿ ಪ್ರದರ್ಶನ ನೀಡಿ, ಹೆಸರು ಮಾಡಿದ್ದರು. ಹೀಗಾಗಿ ಈ ಕಲಾವಿದ ರಾಷ್ಟ್ರಪತಿ ಪ್ರಶಸ್ತಿ ಗಳಿಸಿದ್ದರು.
ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಟನೆಯಲ್ಲಿ ಗಾಯಗೊಂಡ ಕಾರಿನ ಚಾಲಕನಿಗೆ ಚಿಕಿತ್ಸೆಗೆ ಒಳಗಾಗಿದ್ದಾರೆ. ಬೆಳಗಲ್ಲು ವೀರಣ್ಣ ಅವರು, ತೊಗಲು ಗೊಂಬೆಯಾಟದ ಹಿರಿಮೆಯನ್ನು ಸಪ್ತ ಸಾಗರದ ಆಚೆ ತಲುಪಿಸಿದ ಅಪರೂಪದ ಕಲಾವಿದರಾಗಿದ್ದಾರೆ. ಶ್ರೀರಾಮಾಂಜನೇಯ ತೊಗಲು ಗೊಂಬೆ ಕಲಾ ಮೇಳವನ್ನು ಕಟ್ಟಿ ಊರು, ರಾಜ್ಯ, ಹೊರ ರಾಜ್ಯ, ದೇಶ, ವಿದೇಶಕ್ಕೂ ಪ್ರಯಾಣ ಮಾಡಿದ್ದರು.
ಅವರ ನಿಧನದಿಂದ ರಾಜ್ಯದ ಕಲಾಲೋಕ ಬಡವಾಗಿದೆ. ವೀರಣ್ಣ ಅವರು ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಅಲ್ಲೆ ಜಿಲ್ಲೆಯ ಗಣ್ಯರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.








