ತುಮಕೂರು: ಅಧಿಕಾರಿಗಳು ಕಚೇರಿಯಲ್ಲಿದ್ದಾಗಲೇ ಅಟೆಂಡರ್ ಒಬ್ಬಾತ ಕಚೇರಿಗೆ ಬೀಗ ಹಾಕಿ ಪರಾರಿಯಾಗಿರುವ ಘಟನೆ ನಡೆದಿದೆ.
ನಗರದಲ್ಲಿನ ಸಣ್ಣ ನೀರಾವರಿ ಇಲಾಖೆಯ (Minor Irrigation Department) ಅಧಿಕಾರಿಗಳು ಮತ್ತು ನೌಕರರ ಮಧ್ಯೆ ಜಗಳ ನಡೆದ ಹಿನ್ನೆಲೆಯಲ್ಲಿ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಅಟೆಂಡರ್ ಕೆ.ಎಂ.ಅಜಾಜ್ ಪಾಷ ಬೀಗ ಹಾಕಿರುವ ಅಟೆಂಡರ್.. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಪ್ಪೇಸ್ವಾಮಿ, ಇಬ್ಬರು ಎಂಜಿನಿಯರ್ ಸೇರಿದಂತೆ 7 ಜನರನ್ನು ಕಚೇರಿ ಒಳಗೆ ಹಾಕಿ ಬೀಗ ಹಾಕಿದ್ದಾನೆ.
ಎಂಜಿನಿಯರ್ ತಿಪ್ಪೇಸ್ವಾಮಿ 112ಕ್ಕೆ ಕರೆ ಮಾಡಿದ ಕೂಡಲೇ ಪೊಲೀಸರು ಕಚೇರಿಗೆ ಬಂದಿದ್ದಾರೆ. ಆನಂತರ ಬೀಗ ತೆರೆಯಲಾಗಿದೆ. ಆದರೆ, ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಈ ರೀತಿ ಮಾಡಿರುವುದಾಗಿ ಪಾಷಾ ಹೇಳಿದ್ದಾರೆ ಎನ್ನಲಾಗಿದೆ.








