ರಾತ್ರಿ ನಿದ್ರೆ ಮಾಡಿದ್ದ ಕಂದಮ್ಮ ಮುಂಜಾನೆ ಶವವಾಗಿ ಪತ್ತೆ..!
ರಷ್ಯಾ : ರಾತ್ರಿ ನಿದ್ದೆ ಮಾಡಿದ್ದ 3 ವರ್ಷದ ಕಂದಮ್ಮ ಮುಂಜಾನೆ ದುರಂತ ಅಂತ್ಯ ಕಂಡಿತ್ತು. ಪಾಲಕರು ಬೆಳಗ್ಗೆ ಎದ್ದು ನೋಡಿದಾಗ ದೊಡ್ಡ ಆಘಾತ ಕಾದಿತ್ತು. ಯಾಕಂದ್ರೆ ಪಾಲಕರು ನಿದ್ರೆಗೆ ಜಾರಿದ್ದ ವೇಳೆ ಅವರ 3 ವರ್ಷದ ಕಂದಮ್ಮ ನಿದ್ರೆಯಲ್ಲಿ ನಡೆದು ಹೋಗಿ ಸಾವಿಗೀಡಾಗಿದೆ.
ರಷ್ಯಾದ ಸಟ್ಕಾದಲ್ಲಿ ಈ ದಾರುಣ ಘಟನೆ ನಡೆದಿದೆ. ಹೌದು 3 ವರ್ಷದ ಏಂಜಲಿನಾ ಎಂಬ ಮುದ್ದು ಮಗು ಅತ್ಯಂತ ದುರಂತ ಅತ್ಯಂತ ಕಂಡಿದೆ. ರಾತ್ರಿ ನಡೆದು ಹೋದ ಏಂಜಲೀನಾ ಮುಂಜಾನೆ ಮನೆಯ ಮುಂಭಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಅವರ ತಾಯಿ ಸ್ವೆಟ್ಲಾನಾ ಕುಲೆಶೋವಾ ಮಗುವನ್ನ ಕಳೆದುಕೊಂಡು ಮಾನಸಿಕವಾಗಿ ಕುಸಿದುಹೋಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಏಂಜಲಿನಾಗೆ ನಿದ್ರೆಯಲ್ಲಿ ನಡೆಯುವ ಹವ್ಯಾಸವಿತ್ತಂತೆ. ಅನೇಕ ಬಾರಿ ಪಾಲಕರು ಏಂಜಲಿನಾ ನಿದ್ರೆಯಲ್ಲಿ ನಡೆದಾಗ ಆಕೆಯನ್ನು ಮರಳಿ ಬೆಡ್ ಮೇಲೆ ತಂದು ಮಲಗಿಸಿದ್ದಾರೆ. ಆದರೆ, ಆ ರಾತ್ರಿ ಮಾತ್ರ ಮಗಳು ಹೋದದ್ದು, ಪೋಷಕರ ಅರಿವೆಗೆ ಬಂದಿಲ್ಲವಂತೆ.
ಹಾಲಿವುಟ್ ನಟಿಯಂತೆ ಕಾಣಲು 50 ಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಯುವತಿ
ಏಂಜಿಲಿನಾ ನಿದ್ರೆಯಲ್ಲಿ ನಡೆದುಕೊಂಡು ಲಿವಿಂಗ್ ರೂಮ್ ತಲುಪ್ಪಿದ್ದಳು. ಶೀತದಿಂದ ತುಂಬಿದ್ದ ಮನೆಯ ವಾತಾವರಣದಲ್ಲಿ ಮೈನಸ್ 15 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಕತ್ತಲು ಬೇರೆ ಆವರಿಸಿದ್ದರಿಂದ ದಾರಿ ಕಾಣದೇ ವಾಪಸ್ ಹೋಗಲಾರದೇ ಚಳಿಗೆ ಅಲ್ಲೇ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾಳೆ ಎಂದು ಹೇಳಲಾಗ್ತಿದೆ. ಇನ್ನೂ ಘಟನೆ ಸಂಬಂಧ ಪಾಲಕರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ತಾಯಿಯ ವಿರುದ್ಧ ಪೊಲೀಸರು ಕ್ರಮಿನಲ್ ಕೇಸು ದಾಖಲಿಸಿದ್ದಾರೆ. ಆರೋಪ ಸಾಬೀತಾದರೆ ತಾಯಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಬಹುದು ಎನ್ನಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








