ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೋಂ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣದ ಫ್ರೆಂಚ್ ಬಿರಿಯಾನಿ ಸಿನಿಮಾದ ದಿ ಬೆಂಗಳೂರು ಹಾಡು ಯುಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅತಿಥಿ ದೇವೋಭವ.. ಅತಿಥಿ ದೇವೋಭವ ಎಂದು ಶುರುವಾಗುವ ಈ ರ್ಯಾಪ್ ಸಾಂಗ್, ಸಾವಧಾನ ಬೆಂದಕಾಳೂರು ಎನ್ನುತ್ತ ರಿಲೀಸ್ ಆದ ಮೂರೇ ದಿನದಲ್ಲಿ 7 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಈ ಹಾಡಿಗೆ ವಾಸುಕಿ ವೈಭವ್, ಅವಿನಾಶ್ ಬಲೆಕ್ಕಳ ಅವರ ಸಾಹಿತ್ಯವಿದೆ. ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಈ ಹಾಡನ್ನು ಹಾಡಿದ್ದಾರೆ.
ಪನ್ನಗಾಭರಣ ನಿರ್ದೇಶನದ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ದಿಶಾ ಮದನ್, ಡ್ಯಾನಿಶ್ ಸೇಠ್, ಸಾಲ್ ಯೂಸುಫ್ ಮತ್ತು ರಂಗಾಯಣ ರಘು ಮುಖ್ಯ ಪಾತ್ರವರ್ಗದಲ್ಲಿದ್ದಾರೆ. ಈ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಜುಲೈ 24ರಂದು ಬಿಡುಗಡೆಯಾಗಲಿದೆ.








