ಹಾಸನ: ಹೊಳೆನರಸೀಪುರದ ನರ್ಸಿಂಗ್ ಕಾಲೇಜಿನಲ್ಲಿ (Nursing College) ವಿವಾದಕ್ಕೆ ಕಾರಣವಾಗಿದ್ದ ವಿದ್ಯಾರ್ಥಿಗಳ ಗಡ್ಡದ ಜಗಳ ಸುಖಾಂತ್ಯ ಕಂಡಿದೆ.
ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳೊಂದಿಗೆ (Students) ಮಾತುಕತೆ ನಡೆಸಿದ್ದು, ನಿಯಮಗಳನ್ನು ಪಾಲಿಸಲು ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಸೂಚನೆಯಂತೆ ನಡೆದುಕೊಳ್ಳುತ್ತೇವೆ. ಕಾಲೇಜು ನಿಯಮದಂತೆ ಶಿಸ್ತಿನಿಂದ ಇರಬೇಕೆಂದು ಹೇಳಿದರು. ಹೀಗಾಗಿ ಶಿಕ್ಷಕರ ಮಾತಿಗೆ ಗೌರವ ನೀಡಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ನರ್ಸಿಂಗ್ ವಿದ್ಯಾರ್ಥಿಗಳು ರೋಗಿಗಳ ಶುಶ್ರೂಷೆ ಮಾಡಬೇಕು. ರೋಗಿಗಳ ಬಳಿ ಹೋಗಬೇಕು ಅವರು ನಿಮ್ಮನ್ನು ನೋಡಿದ ಕೂಡಲೆ ಇವರು ಚಿಕಿತ್ಸೆ ಕೊಡುತ್ತಾರೆ ಎನ್ನುವ ಭಾವನೆ ಬರಬೇಕು. ಹೀಗಾಗಿ ಎಲ್ಲರೂ ಗಡ್ಡ ಟ್ರಿಂ ಮಾಡಿಕೊಂಡು ಶಿಸ್ತಾಗಿ ಬನ್ನಿ ಎಂದು ಶಿಕ್ಷಕರು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಸದ್ಯ ವಿದ್ಯಾರ್ಥಿಗಳು ಇದಕ್ಕೆ ಒಪ್ಪಿಕೊಂಡಿದ್ದಾರೆ.