ಮುಂಬೈ: ಆದೇಕೋ ಏನೋ, ಕರ್ನಾಟಕದ ಅದರಲ್ಲೂ ಚಾಮರಾಜನಗರದ ಬಂಡೀಪುರದ ದಟ್ಟಾರಣ್ಯ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಇದೆ.
ಕಳೆದ ವರ್ಷ ರಜನಿಕಾಂತ್‍ರಿಂದ ಸುದ್ದಿಯಾಗಿದ್ದ ಬಂಡೀಪುರ, ಈಗ ಮತ್ತೆ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಮೂಲಕ ಜಾಗತಿಕ ಮಟ್ಟದಲ್ಲಿ ಮಿಂಚಲಿದೆ.
ಡಿಸ್ಕವರಿ ಚಾನೆಲ್‍ನ ಮ್ಯಾನ್ ವರ್ಸಸ್ ವೈಲ್ಡ್ ಶೋ ಮೂಲಕ ಖ್ಯಾತಿ ಪಡೆದ ಬಿಯರ್ ಗ್ರಿಲ್ಸ್, `ಇನ್‍ಟು ದಿ ವೈಲ್ಡ್ ವಿತ್ ಬಿಯರ್ ಗ್ರಿಲ್ಸ್’ಗೆ ಆಯ್ಕೆ ಮಾಡಿದ್ದು ಚಾಮರಾಜನಗರ ಬಂಡಿಪುರ ಅರಣ್ಯವನ್ನು. ಕಳೆದ ಜನವರಿಯಲ್ಲಿ ಶೋಗಾಗಿ ಚಿತ್ರೀಕರಣ ಮಾಡಲಾಗಿತ್ತು. ಸತತ 6 ಗಂಟೆಗಳ ಕಾಲ ಬಂಡೀಪುರದ ದಟ್ಟಾರಣದಲ್ಲಿ ನಡೆದ ಶೂಟಿಂಗ್‍ನಲ್ಲಿ ಕಿಲಾಡಿ ಅಕ್ಷಯ್ ಖುಷಿ ಖುಷಿಯಾಗಿ ಪಾಲ್ಗೊಂಡಿದ್ದರು.
ದಟ್ಟ ಕಾನನದೊಳಗೆ ಸಂಚಾರ ಮಾಡಿದ್ದ ಅಕ್ಷಯ್‍ಕುಮಾರ್, ಕಾಡು ಪ್ರಾಣಿಗಳನ್ನು ಕೂಗಳತೆ ದೂರದಿಂದ ಕಣ್ತುಂಬಿಕೊಂಡಿದ್ದರು. ನೀರಿನಾಳಕ್ಕೆ ಇಳಿದು ಮೊಸಳೆಯನ್ನೂ ನೋಡಿದ್ದಾರೆ. ಹಗ್ಗದ ಮೇಲೆ ಹಳ್ಳಗಳನ್ನು ದಾಟಿ
ಸಾಹಸ ಮೆರೆದಿದ್ದಾರೆ.
ಅಕ್ಷಯ್‍ಕುಮಾರ್ ನಟಿಸಿರುವ ಮ್ಯಾನ್ ವರ್ಸಸ್ ವೈಲ್ಡ್ ಶೋ ಪ್ರಸಾರಕ್ಕೆ ದಿನಾಂಕ ಫಿಕ್ಸ್ ಆಗಿದೆ. ಡಿಸ್ಕವರಿ ಪ್ಲಸ್‍ನಲ್ಲಿ ಸೆಪ್ಟೆಂಬರ್ 11ರಂದು ಪ್ರಸಾರವಾದರೆ, ಡಿಸ್ಕವರಿ ಚಾನೆಲ್‍ನಲ್ಲಿ ಸೆ.14ರಂದು ಪ್ರಸಾರವಾಗಲಿದೆ. ಈ ವಿಚಾರವನ್ನು ಸ್ವತಃ ಅಕ್ಷಯ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
******
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.








