ಭಗವದ್ಗೀತೆ ಒಂದೇ ದೇವರನ್ನು ಮಾತ್ರ ಪೂಜಿಸಿ ಎಂದು ಹೇಳುವುದಿಲ್ಲ : ಪ್ರತಾಪ್ ಸಿಂಹ
ಮೈಸೂರು: ಭಗವದ್ಗೀತೆ, ಕ್ರಿಶ್ಚಿಯನ್, ಇಸ್ಲಾಂ ರೀತಿ ಅಲ್ಲ, ಅದು ಒಂದೇ ದೇವರು ಮಾತ್ರ ಪೂಜಿಸಿ ಎಂದು ಹೇಳುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಪಠ್ಯ ಕ್ರಮದಲ್ಲಿ ಭಗವದ್ಗೀತೆ ಅಳವಡಿಸುವ ವಿಚಾರ ಮಾತನಾಡಿದ ಅವರು, ಬೈಬಲ್, ಕುರಾನ್ ಹಾಗೂ ಭಗವದ್ಗೀತೆಗೂ ವ್ಯತ್ಯಾಸವಿದೆ. ಭಗವದ್ಗೀತೆ ಹಿಂದೂಗಳ ಧರ್ಮಗ್ರಂಥ ಮಾತ್ರವಲ್ಲ, ಅದರಲ್ಲಿ ಜೀವನದ ನೀತಿ ಪಾಠವಿದೆ. ಮಹಾಭಾರತ ಧರ್ಮ, ಅಧರ್ಮದ ನಡುವೆ ನಡೆದ ಯುದ್ಧವಾಗಿದೆ. ಅದೇ ಸಮಯದಲ್ಲಿ ಕೃಷ್ಣ ಭಗವದ್ಗೀತೆ ಭೋದನೆ ಮಾಡಿ ಧರ್ಮದ ದಾರಿಯಲ್ಲಿ ನಡೆಯುವಂತೆ ಹೇಳಲಾಗಿದೆ.
ಧರ್ಮ ಎಂದರೆ ಅದು ಸತ್ಯ. ಇದು ಒಂದು ಧರ್ಮಕ್ಕೆ ಸಿಮೀತವಾಗಿಲ್ಲ. ಹಿಂದೂ ಧರ್ಮವೇ ಜೀವನ ಶೈಲಿಯಾಗಿದೆ. ಇದನ್ನು ಶಾಲೆಯ ಹಂತದಲ್ಲಿ ತಿಳಿಸಬೇಕಾಗಿರುವುದು ಅಗತ್ಯವಿದೆ. ಕುರಾನ್, ಬೈಬಲ್ ಕಲಿಸಿದರೆ ಒಬ್ಬ ವ್ಯಕ್ತಿ ದೇವರು ಅಂತಾ ಕಲಿಸಲಾಗುತ್ತದೆ. ಆದರೆ ಭಗವದ್ಗೀತೆ ಧರ್ಮ ಅಧರ್ಮ ಬಗ್ಗೆ ಬೋಧಿಸುತ್ತದೆ. ಇದನ್ನು ಪಠ್ಯವಾಗಿ ತರಬೇಕು ಅಂತಾ ಸಿಎಂ ಸಚಿವರು ತರಲು ಹೊರಟಿರುವುದು ಸ್ವಾಗತಾರ್ಹವಾಗಿದೆ. ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ಕುಮಾರಸ್ವಾಮಿ ಅವರ ಮಾತನ್ನು ಸಂಪೂರ್ಣ ಒಪ್ಪುತ್ತೇನೆ. ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ತಲೆಯನ್ನು ತುಂಬಿಸುತ್ತದೆ. ಸತ್ಯದ ದಾರಿಯಲ್ಲಿ ಸಾಗುವುದನ್ನು ಕಲಿಸುತ್ತದೆ. ಕುಟುಂಬ ರಾಜಕಾರಣ ಮಾಡಬಾರದು. ನನಗೆ ಎಲ್ಲಾ ಅಧಿಕಾರ ಬೇಕು ಅನ್ನೋ ಮನಸ್ಥಿತಿಯನ್ನು ಬದಲಾಯಿಸುತ್ತದೆ. ಈ ಕಾರಣಕ್ಕೆ ಮಕ್ಕಳಿಗೆ ಭಗವದ್ಗೀತೆ ಅವಶ್ಯಕತೆ ಇದೆ ಎಂದು ಎಚ್ಡಿಕೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.








