ಪಂತ್ ಜೊತೆಗಿನ ಕಾದಾಟ ಅದ್ಭುತ : ನಾಥನ್ ಲಿಯಾನ್
ಬ್ರಿಸ್ಬೇನ್ : ಭಾರತ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ರಿಷಭ್ ಪಂತ್ ಅವರೊಂದಿಗಿನ ಕಾಳಗಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ. ಅವರೊಂದಿಗಿನ ಕಾದಾಟ ನಿಜಕ್ಕೂ ಅದ್ಭುತವಾಗಿರುತ್ತದೆ ಎಂದು ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ತಿಳಿಸಿದ್ದಾರೆ.
ಪಂದ್ಯದ ಬಳಿಕ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಯಾನ್, ಇವತ್ತು ಮತ್ತು ನಿನ್ನೆ 3ನೇ ದಿನದ ವಿಕೆಟ್ ನಂತೆಯೇ ಇತ್ತು. ಆಫ್ ಸ್ಟಂಪ್ ನ ಹೊರಗೆ ಉತ್ತಮ ಬಿರುಕಿತ್ತು.
ನಾನು ಅದನ್ನು ಗುರಿಯಾಗಿಸಿ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಪಿಚ್ ನಲ್ಲಿ ಸ್ವಲ್ಪ ಬಿರುಕಿರುವುದು ನನಗೆ ಸಂತೋಷವಾಗಿದೆ. ಇದರಿಂದ ನನಗೇನಾದರೂ ಅನುಕೂಲವಾಗಬಹುದು ಎಂಬ ಆಶಾವಾದದಲ್ಲಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಕಳೆದ ಪಂದ್ಯದಲ್ಲಿ ಪಂತ್ ಆಟದ ಬಗ್ಗೆ ಮಾತನಾಡಿದ ಅವರು, ರಿಷಭ್ ಪಂತ್ ಯಾವಾಗಲೂ ನನ್ನ ಬೌಲಿಂಗ್ ದಂಡಿಸಲು ಪ್ರಯತ್ನಿಸುತ್ತಾರೆ,
ಅವರಿಗೆ ಬೌಲಿಂಗ್ ಮಾಡುವುದಕ್ಕೆ ಕಾಯುತ್ತಿದ್ದೇನೆ. ಅವರೊಂದಿಗಿನ ಕಾದಾಟ ನಿಜಕ್ಕೂ ಅದ್ಭುತವಾಗಿರುತ್ತದೆ ಎಂದು ತಿಳಿಸಿದರು.
ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ತಂದೆ ನಿಧನ
ಇಂಡೋ_ಆಸೀಸ್ ಅಂತಿಮ ಟೆಸ್ಟ್ ಪಂದ್ಯ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಪಾಲಿನ 100ನೇ ಟೆಸ್ಟ್ ಪಂದ್ಯವಾಗಿದೆ.
ಸರಣಿ ವಶಪಡಿಸಿಕೊಳ್ಳಲು ಉಭಯ ತಂಡಗಳಿಗೂ ಈ ಪಂದ್ಯ ಮಹತ್ತರವಾಗಿದೆ. ಈ ಪಂದ್ಯದಲ್ಲಿ ಲಿಯಾನ್ ತಮ್ಮ 397ನೇ ವಿಕೆಟ್ ಆಗಿ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel