ಬಜೆಟ್ ದೇಶದ ಆರ್ಥಿಕತೆಗೆ ಸ್ಥಿರತೆ ಮತ್ತು ತೆರಿಗೆ ವಿಚಾರದಲ್ಲಿ ದೇಶಕ್ಕೆ ಸಹಾಯವಾಗಲಿದೆ: ನಿರ್ಮಲಾ ಸೀತಾರಾಮನ್ Saaksha Tv
ನವದೆಹಲಿ: 2022 ಬಜೆಟ್ ಮಂಡನೆ ಮೇಲಿನ ಚರ್ಚೆ ನಡೆಯುತ್ತಿದ್ದು, ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ನ ಅವರು ಈ ಬಜೆಟ್ ದೇಶದ ಆರ್ಥುಕತೆಗೆ ಸ್ಥಿರತೆ ಮತ್ತು ತೆರಿಗೆ ವಿಚಾರದಲ್ಲಿ ದೇಶಕ್ಕೆ ಸಹಾಯಕಾರಿಯಾಗಲಿದೆ ಎಂದು ವಿತ್ತ ಸಚಿವೆ ತಮ್ಮ ಬಜೆಟ್ ನ್ನು ಸಮರ್ಥಿಸಿಕೊಂಡರು.
ಇಂದು ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ವಿರೋಧ ಪಕ್ಷಗಳು ಆರೋಪಕ್ಕೆ ಉತ್ತರಿಸಿದ ಅವರು ನಾವು ನಿರಂತರತೆ ಬೆಳವಣಿಗೆಗೆ ಸಹಕಾರಿಯಾಗುವಂಥ ಬಜೆಟ್ ಮಂಡಿಸಿದ್ದೇವೆ.ಆರ್ಥಿಕತೆಯು ಸಾಂಕ್ರಾಮಿಕ ರೋಗದಿಂದ ಹೊರಬರುವ ಹಂತದಲ್ಲಿ ನಿರಂತರತೆಯ ಹಂತವು ನಿರ್ಣಾಯಕವಾಗಿದೆ” ಎಂದು ಅವರು ಹೇಳಿದರು.
ಮುಂದುವರೆಸಿ ಸ್ವಾತಂತ್ರ್ಯಗಳಸಿ 100 ವರ್ಷದಲ್ಲಿ ಸಾಧಿಸಬೇಕಾದ ಗುರಿಗಳನ್ನು ದೃಷ್ಟಿಯಲ್ಲಿಟ್ಟಕೊಂಡು ಬಜೆಟ್ ಮಂಡಿಸಲಾಗಿದೆ. ಹಾಗೇ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಿಂದ ಬರುವ ಮಾರ್ಗದರ್ಶನವು ಅತ್ಯಂತ ಮುಖ್ಯವಾಗಿದೆ. ಅದು ಎಲ್ಲವನ್ನೂ ಒಟ್ಟಿಗೆ ತರುತ್ತದೆ. ಭಾರತದ ಕೃಷಿಯನ್ನು ಸುಧಾರಿಸಲು ಮತ್ತು ಆಧುನೀಕರಿಸಲು ಡ್ರೋನ್ ಗಳನ್ನು ಸಾಧನವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.









