ವಂಚನೆ ಕೇಸ್ | ಉಮಾಪತಿ ವಿಚಾರದಲ್ಲಿ ಭೂಪತಿ ಮೌನ..!
ಬೆಂಗಳೂರು : ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರು ಪ್ರಕರಣ ಸಂಬಂಧ ದರ್ಶನ್ ಅವರಿಗೆ ಪ್ರಶ್ನೆ ಕೇಳಿದರು.
ಇದಕ್ಕೆ ದರ್ಶನ್ ಅವರು, ನಿನ್ನೆ ಉಮಾಪತಿ ಮಾತಾಡಿದ್ದಾರೆ. ನಾನು ಕೂಡ ಪ್ರತಿಕ್ರಿಯೆ ಕೊಟ್ಟು ಆಗಿದೆ.
ಕೇಸು ಪೊಲೀಸ್ ಠಾಣೆಯಲ್ಲಿದೆ. ತನಿಖೆ ನಡೆಯುತ್ತಿದೆ ಅಲ್ಲಿಯೇ ಇತ್ಯರ್ಥವಾಗಲಿದೆ ಎಂದರು.
ಇನ್ನು ಇದಕ್ಕೆಲ್ಲಾ ಸಲಹೆ ಕೊಡಬೇಕಾದವರು ಪೊಲೀಸರೇ, ಅವರು ಹೀಗಂದ್ರು, ನಾನು ಹೀಗಂದೆ ಅಂತ ಅಲ್ಲ. ಅವರ ಸಲಹೆ ಮೇರೆಗೆ ನಿರ್ಧಾರ ಮಾಡಬೇಕು ಎಂದು ಹೇಳಿದರು.