National News – ಬಜೆಟ್ ಗೂ ಮುನ್ನ ಸರ್ವ ಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ
ಬಜೆಟ್ಗೂ ಮೊದಲು ಸರ್ವಪಕ್ಷಗಳ ಸಭೆಯನ್ನ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕರೆದಿದ್ದಾರೆ. ಈ ಸಭೆ ವರ್ಚುಯಲ್ ಮೂಲಕ ಜನವರಿ 31 ರಂದು ನಡೆಯಲಿದೆ. ಕಲಾಪಗಳು ಸುಗಮವಾಗಿ ನಡೆಯುವಂತೆ ವಿರೋಧ ಪಕ್ಷಗಳ ಸಹಕಾರವನ್ನು ಕೇಂದ್ರ ಸಚಿವರು ಕೋರಲಿದ್ದಾರೆ.
ಫೆಬ್ರವರಿ 1 ರಂದು ಬಜೆಟ್ ಮಂಡನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕಾರಣಕ್ಕೆ ಸರ್ವಪಕ್ಷ ಸಭೆ ಮಹತ್ವ ಪಡೆದುಕೊಂಡಿದೆ. “ಸಂಸತ್ ಕಲಾಪ ಸುಗಮವಾಗಿ ನಡೆಯುಂತಾಗಲು ಎಲ್ಲರ ಸಹಕಾರ ಅಗತ್ಯ ಇದೆ. ಈ ಬಗ್ಗೆ ಚರ್ಚಿಸುವ ಉದ್ದೇಶದಿಂದ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಸಭೆಗೆ ಆಹ್ವಾನಿಸುತ್ತಿದ್ದೇನೆ ಎಂದು ಪ್ರಹ್ಲಾದ್ ಜೋಶಿ ಸುದ್ದಿ ಮಾದ್ಯಮಗಳಿಗೆ ಹೇಳಿದ್ದಾರೆ.
ಎರಡನೇ ಹಂತದ ಚಳಿಗಾಲದ ಅಧಿವೇಶನ ಜನವರಿ 31 ರಿಂದ ಫೆಬ್ರವರಿ 11 ರವರೆಗೆ ನಡೆಯಲಿದೆ. ಈ ವೆಳೆ ಬಜೆಟ್ ಮಂಡನೆ ಆಗಲಿದೆ. The central government called an all-party meeting before the budget