ಚಾಮರಾಜನಗರ: ನಗರಸಭೆ ಅಧಿಕಾರಿಗಳು ಬದುಕಿರುವ ವ್ಯಕ್ತಿಯ ಶವಸಂಸ್ಕಾರವಾಗಿದೆ ಎಂದು ನಾಮಪತ್ರ ನೀಡಿರುವ ಘಟನೆ ಕೊಳ್ಳೇಗಾಲ ನಗರಸಭೆಯಲ್ಲಿ ನಡೆದಿದೆ.
ನಿಧನರಾಗಿದ್ದ ತಮ್ಮ ತಾಯಿಯ ಶವಸಂಸ್ಕಾರದ ದೃಢೀಕರಣ ಪತ್ರಕ್ಕಾಗಿ ಶಂಕರ್ ಎಂಬ ವ್ಯಕ್ತಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯ ಶವ ಸಂಸ್ಕಾರವಾಗಿದೆ ಎಂದು ನಾಮಪತ್ರ ಸಲ್ಲಿಕೆ ಮಾಡಲಾಗಿದೆ.
ಕೊಳ್ಳೇಗಾಲ ಕುರುಬರ ಬೀದಿಯ ನಿವಾಸಿಯಾಗಿರುವ ಶಂಕರ್ ಅವರ ಪುಟ್ಟಮ್ಮ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದರು. ಅ.27 ರಂದು ಕೊಳ್ಳೇಗಾಲಕ್ಕೆ ತಂದು ಶವಸಂಸ್ಕಾರ ಮಾಡಲಾಗಿತ್ತು. ಹೀಗಾಗಿ ದೃಢೀಕರಣ ಪತ್ರಕ್ಕಾಗಿ ಪುಟ್ಟಮ್ಮ ಅವರ ಪುತ್ರ ಶಂಕರ್ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ತಾಯಿಯ ಆಧಾರ್ ಕಾರ್ಡ್ ಕೂಡ ನೀಡಲಾಗಿತ್ತು. ಆದರೆ, ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.