ಯು ಪಿ ಎಲೆಕ್ಷನ್ – ಕಾಂಗ್ರೆಸ್ ಅಭ್ಯರ್ಥಿಗಳ ಎರಡನೆ ಪಟ್ಟಿ ರಿಲೀಸ್…
ಉತ್ತರ ಪ್ರದೇಶದ ವಿಧಾನಸಾಭ ಚುನಾವಣೆಗೆ ಕಾಂಗ್ರೆಸ್ 41 ಅಭ್ಯರ್ಥಿಗಳ ಹೆಸರನ್ನು ಗುರುವಾರ ಪ್ರಕಟಿಸಿದೆ. ಇವರಲ್ಲಿ ಎರಡನೇ ಮತ್ತು ಮೂರನೇ ಹಂತದ ಅಭ್ಯರ್ಥಿಗಳು ಸೇರಿದ್ದಾರೆ. 16 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 41 ಅಭ್ಯರ್ಥಿಗಳ ಹೆಸರನನ್ ಕಾಂಗ್ರೆಸ್ ಇದರಲ್ಲಿ ಬಿಡುಗಡೆಗೊಳಿಸಿದೆ.
ಇದರಲ್ಲಿ ಬಿಜೆಪಿ ನಾಯಕಿ ಹಾಗೂ ಹರ್ಯಾನ್ವಿ ಗಾಯಕಿ ಸಪ್ನಾ ಚೌಧರಿ ಅವರ ಬೌನ್ಸರ್ ಪೂನಂ ಪಂಡಿತ್ ಬುಲಂದ್ ನಗರದ ಸಯಾನಾ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ. ಎರಡನೇ ಪಟ್ಟಿಯಲ್ಲಿ, ಮುಸ್ಲಿಮರ ಮೇಲೆ ಗರಿಷ್ಠ ಗಮನ ನೀಡಲಾಗಿದ್ದು, 9 ಮುಸ್ಲಿಂ ಮುಖಂಡರಿಗೆ ಟಿಕೆಟ್ ನೀಡಲಾಗಿದೆ.
ಮಹಿಳೆಯರು ಟಿಕೆಟ್ ಪಡೆದಿರುವ 16 ಸ್ಥಾನಗಳಲ್ಲಿ ಸಹರಾನ್‌ಪುರ ನಗರ, ಚಾರ್ತಾವಾಲ್, ಠಾಕುರ್ದ್ವಾರ, ಬಿಲಾರಿ, ಚಂದೌಸಿ, ಸಾಹಿಬಾಬಾದ್, ಮೋದಿನಗರ, ಹಾಪುರ್, ಸಯಾನಾ, ದಿಬಾಯಿ, ಖೈರ್, ಇಗ್ಲಾಸ್, ಛತ್ರ, ಮಂತ್, ನವಾಬ್‌ಗಂಜ್, ಅಕ್ಬರ್‌ಪುರ ಸೇರಿವೆ.
ಈ ಹಿಂದೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 125 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ 50 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನೂ ಕಾಂಗ್ರೆಸ್ ನಾಮನಿರ್ದೇಶನ ಮಾಡಿದೆ. ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ಲಲ್ಲು ಅವರಿಗೆ ಟಿಕೆಟ್ ಸಿಕ್ಕಿದೆ. ಆರಾಧನಾ ಮಿಶ್ರ ಮೋನಾ ಅವರನ್ನು ಪ್ರತಾಪ್‌ಗಢದ ರಾಮ್‌ಪುರಖಾಸ್ ಸ್ಥಾನದಿಂದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಇದಲ್ಲದೇ ಸದಾಫ್ ಜಾಫರ್ ಅವರನ್ನೂ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಉನ್ನಾವೊ ಕ್ಷೇತ್ರದಿಂದ ಆಶಾ ಸಿಂಗ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.








