ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಕಾಶ್ಮೀರ ಒಂದು ಬಾರಿ ಮುಸ್ಲಿಂರ ಕೈ ಸೇರಿದ ಮೇಲೆ ಪಂಡಿತರನ್ನು ಹೊಡೆದು ಓಡಿಸಲಾಯಿತು.
ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿಯಂತ ಕ್ರೈಸ್ತನ ಕೈಗೆ ಅಧಿಕಾರ ಸಿಕ್ಕ ಮೇಲೆ ಪವಿತ್ರ ತಿರುಪತಿ ಲಡ್ಡುಗೆ ಹಂದಿ, ದನದ ಕೊಬ್ಬು, ಮೀನಿನ ಎಣ್ಣೆ ಸೇರಿಸಲಾಯಿತು. ಕೇರಳ ಪರಿಸ್ಥಿತಿ ಏನಾಗಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಕರ್ನಾಟಕದಲ್ಲೂ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಮುಸ್ಲಿಂ ಓಲೈಕೆ ರಾಜಕೀಯ ನಡೆಯುತ್ತಿದೆ. ಇಂದು ನಾವು ಎಚ್ಚೆತ್ತುಕೊಳ್ಳದಿದ್ದರೆ ಕೇರಳ, ಕಾಶ್ಮೀರದಂತಹ ಪರಿಸ್ಥಿತಿ ಬರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾವು ಕುಡಿಯುತ್ತಿರುವ ನೀರು ಕನ್ನಾಂಬಾಡಿ ಕಟ್ಟೆಯ ನೀರು. ಅದನ್ನು ಕಟ್ಟಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ. ಮೈಸೂರಿನ ರಾಜಮನೆತನ ಕಟ್ಟಿದ ಕಾಲೇಜಲ್ಲೇ ಓದಿದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಜಯಂತಿ ಮಾಡಿದ್ದು ಮೈಸೂರು ರಾಜಮನೆತ ನಾಶಕ್ಕೆ. ಟಿಪ್ಪು ಸುಲ್ತಾನ್ ನನ್ನು ಮೆರೆಸಿದರು. ಹೀಗಾಗಿ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ನಾಗೇಂದ್ರ ಮಾತನಾಡಿ, ಮಸೀದಿ ಮುಂದೆ ಗಣೇಶ ಮೆರವಣಿಗೆ ಬಂದ್ರೆ ಕಲ್ಲು ಎಸೆಯುತ್ತೀರಾ.?
ಮಸೀದಿ ರೋಡ್ ನಿಮ್ಮ ಅಪ್ಪಂದಾ.? ಮಸೀದಿ ರೋಡು ನಮ್ಮದೆ. ಕರ್ನಾಟಕನೂ ನಮ್ದೆ. ಈ ದೇಶನೂ ನಮ್ದೇ ಎಂದು ಗುಡುಗಿದ್ದಾರೆ.