ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

‘ಭೂ ಖಂಡಾಂತರ ಚಲನೆಯೂ; ಹಿಮಾಲಯವೆಂಬ ಹಿರಿಯಜ್ಜನ ಜನನವೂ’ (The continental drift and the birth of Himalayas)

admin by admin
August 10, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಭೂ ಖಂಡಾಂತರ ಚಲನೆಯೂ; ಹಿಮಾಲಯವೆಂಬ ಹಿರಿಯಜ್ಜನ ಜನನವೂ’
(The continental drift and the birth of Himalayas) :

ಭಾರತದ ಹಿಮಾಚ್ಛಾದಿತ ಹಿಮಶಿಖರಗಳನ್ನೊಳಗೊಂಡ ಭವ್ಯ ಹಿಮಾಲಯಗಳು ಭಾರತದ ಮುಕುಟಮಣಿಗಳೆಂದು ಶಾಸ್ತ್ರ ಪುರಾಣಗಳಲ್ಲಿ ಹೆಸರು ಪಡೆದಿವೆ. ಹಿಮಾಲಯಗಳು ವೇದ ಪುರಾಣಗಳಲ್ಲಿ ತಮ್ಮದೇ ಹಿನ್ನೆಲೆ ಹೊಂದಿವೆಯಾದರೂ ಈ ಹಿಮಾಲಯಗಳ ವಾಸ್ತವತೆಯ ಕುರಿತಾದ ಕೆಲ ಅಂಶಗಳು ಅದಕ್ಕು ಅಚ್ಚರಿಯೆನಿಸುವಷ್ಟು ಕೌತುಕವಾಗಿವೆ. ಹಿಮಾಲಯಗಳು ಹುಟ್ಟು ಹೇಗಾಯ್ತು? ಅವುಗಳು ದೈವನಿರ್ಮಿತವೆ? ಯಾವಾಗ ಅವುಗಳ ಸೃಷ್ಟಿಯಾಯ್ತು? ಎಂಬ ಪ್ರಶ್ನೆಗಳಿಗೆ ಆಧುನಿಕ ಭೂವಿಜ್ಞಾನ ಸ್ವಾರಸ್ಯಕರ ವಿವರಣೆಗಳನ್ನ ಕೊಡುತ್ತದೆ.

Related posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

March 11, 2026
ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

March 11, 2026

ಈಗ ನಮಗೆ ಕಾಣುವ ಹಿಮಾಲಯಗಳು ಇಂದಿನ ರೂಪಕ್ಕೆ ಬಂದು ಈಗ್ಗೆ ಎರಡು ಕೋಟಿ ವರ್ಷಗಳಾಗಿವೆ ಎಂದು ಭೂ ತಜ್ಞರು ವಾದಿಸುತ್ತಾರೆ. ಇದು ಭೂ ಪಲ್ಲಟ ಅಥವಾ ಭೂ ಖಂಡಾಂತರ ಚಲನೆಯ ಸಿದ್ಧಾಂತದಿಂದ ಸಾಬೀತಾಗಿರುವ ಸಂಗತಿ. ನಿಮಗೆಲ್ಲ‌ ನಮ್ಮ‌ ಭೂ‌ ಖಂಡವು ಮುಕ್ಕಾಲು ಪಾಲು ನೀರಿನಿಂದಲೂ, ಕಾಲು ಭಾಗ ಭೂಪ್ರದೇಶದಿಂದಲೂ ಕೂಡಿದೆ ಎಂಬುದು ಗೊತ್ತಿದೆ. ಇವತ್ತು ಭೂಮಿಯ ಮೇಲೆ ಏಳು ಖಂಡಗಳನ್ನ, ಅಸಂಖ್ಯಾತ ರಾಷ್ಟ್ರಗಳನ್ನ, ದ್ವೀಪಗಳನ್ನ, ಬೆಟ್ಟಗಳನ್ನ, ಕಾಡುಗಳನ್ನ ಹಾಗೂ ಹಿಮಚ್ಛಾದಿತ ಥಂಡ್ರಾ ಪ್ರದೇಶಗಳನ್ನ ವರ್ಗೀಕರಿಸಿ ಪ್ರತ್ಯೇಕಿಸಿದ್ದಾರೆ. ಆದರೆ ಭೂಮಿಯು ಇದೇ ಸ್ವರೂಪದಲ್ಲೇ ಮೊದಲಿಂದಲೂ ಇತ್ತೆ ಎಂಬ ಪ್ರಶ್ನೆ ಸರಿಸುಮಾರು ಹದಿನೈದನೇ ಶತಮಾನದಿಂದಲೂ ಕಾಡುತ್ತಿದ್ದ ಪ್ರಶ್ನೆಯಾಗಿತ್ತು.

ಭೂಮಿಯ ಭೂ ಖಂಡಗಳು ನೀರಿನ ಹರಿವಿನೊಂದಿಗೆ ತಾವೂ ಸಹ ಚಲಿಸುತ್ತಾ ಕೆಲವೊಮ್ಮೆ ಸವೆಯುತ್ತಾ ತಮ್ಮ ಸ್ಥಾನದಿಂದ ಕಾಲಕ್ರಮೇಣ ಪಲ್ಲಟಗೊಂಡಿವೆ ಎಂಬುದು ಆಗಿನ ಕೆಲ ವಿದ್ವಾಂಸರ ಸಂಶಯವಾಗಿತ್ತು. ಸಂಪ್ರದಾಯವಾದಿಗಳ ಪ್ರಾಬಲ್ಯವಿದ್ದುದರಿಂದ ಆಗ ಇಂಥ ಹೊಸ ಚಿಂತನೆಗಳಿಗೆ ಆಸ್ಪದವಿರಲಿಲ್ಲ. ಅಂತಿಮವಾಗಿ 1912ರಲ್ಲಿ ಆಲ್ಫ್ರೆಡ್ ವೇಗ್ನರ್ ಎಂಬ ಭೂ ತಜ್ಞ ಇದೇ ದಿಕ್ಕಲ್ಲಿ ಚಿಂತಿಸಿ. ವಿಶ್ವ ಪರ್ಯಟನೆ ಮಾಡಿ ಈ ಸಿದ್ಧಾಂತವನ್ನ ಸ್ಪಷ್ಟೀಕರಿಸಿದ. ಅವನ ಪ್ರಕಾರ ಮಿಲಿಯಾಂತರ ವರ್ಷಗಳಲ್ಲಿ ಭೂಮಿ ತನ್ನ ಭೂ ಪ್ರದೇಶದ ರೂಪ ರಚನೆಯಲ್ಲಿ ಮಹತ್ತರ ಬದಲಾವಣೆ ಕಂಡು ಇಂದು ಈ ರೂಪಕ್ಕೆ ಬಂದು ನಿಂತಿದೆ ಹಾಗೂ ಇದು ಇನ್ನು ಮುಂದಕ್ಕು ಸಹ ಮುಂದುವರಿದು ಭೂಮಿ ತನ್ನ ಮುಂದಿನ ಮಿಲಿಯಾಂತರ ವರ್ಷಗಳಲ್ಲಿ ಇನ್ನಷ್ಟು ಬದಲಾಗುತ್ತಾ ಹೋಗಲಿದೆ ಎಂದು ವಾದಿಸಿದ. ಇವನ ಈ ವಾದವೇ ‘ಭೂ ಖಂಡಾಂತರ ಚಲನಾ ಸಿದ್ಧಾಂತ’ (Continental drift theory)

ಈ ಸಿದ್ಧಾಂತದ ಪ್ರಕಾರ ಸುಮಾರು‌ 250 ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ನಡುವೆ ಈಗಿನ ಎಲ್ಲಾ ಖಂಡಗಳೂ ಜಂಟಿಯಾಗಿದ್ದು ಒಂದು ದೊಡ್ಡ ಭೂಖಂಡ ಮಾತ್ರವಿತ್ತು. ತದನಂತರದ ನೀರಿನ ಹರಿವು ಹಾಗೂ ಸಾಗರಗಳ ಕೊರೆಯುವಿಕೆಯಿಂದ ಈ ಬೃಹತ್ ಭೂಖಂಡವು ಮೆಲ್ಲನೆ ಛಿದ್ರವಾಗುತ್ತಾ ಬಂದು ಖಂಡಗಳು ಬೇರ್ಪಟ್ಟವು. ಅಧ್ಯಯನಗಳ ಪ್ರಕಾರ ಭೂಮಿಯ ಆಯಸ್ಸು ನಾಲ್ಕು ಬಿಲಿಯನ್ ವರ್ಷಗಳು. ಆಗ ಆರಂಭದಲ್ಲಿ ಭೂಮಿ ಒಂದು ದೊಡ್ಡ ಕಲ್ಲಿನ ಉಂಡೆಯಾಗಿತ್ತು. ಅನಿಲಗಳ ವರ್ತನೆ ಹಾಗೂ ಹವಾಮಾನ ವೈಪರೀತ್ಯದಿಂದ ಭೂ ಮಧ್ಯದ ಬಿಸಿ ಲಾವಾದ ಒತ್ತಡದಿಂದ ಈ ಉಂಡೆ ಸಿಡಿದು ಚೂರು ಚೂರಾಗಿ ಅಲ್ಲಲ್ಲಿ ತಗ್ಗು ಗುಂಡಿಗಳು ಉಂಟಾದವು.

ಕಾರ್ಮೋಡಗಳು ದಟ್ಟೈಸಿ ದಟ್ಟವಾದ ಮಳೆ ಸುರಿದು ಆ ಗುಂಡಿಗಳು ನೀರಿನಿಂದ ತುಂಬಿಕೊಂಡವು. ಮಿಲಿಯಾಂತರ ವರ್ಷಗಳಲ್ಲಿ ಭೂಮಿಯ ಮೇಲೆ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿ ಸಾಗರ ಸಮುದ್ರಗಳ ಸೃಷ್ಟಿಯಾಗಿ ಅವುಗಳಿಂದ ಪಾಚಿ ಮುಂತಾದ ಜಲಚರಗಳೂ ಹಾಗೂ ಬಯಲಲ್ಲಿ ಹಸಿರೂ ನಿರ್ಮಾಣವಾಯ್ತು. ಜೀವಜಾಲ ಹರಡಿದಂತೆ ಈಗ್ಗೆ 400 ಮಿಲಿಯನ್ ವರ್ಷಗಳಿಂದ ಭೂಮಿಯಲ್ಲಿ ಖಂಡಾಂತರ ಚಲನೆ ಅಂದರೆ ನೀರು ಹಾಗೂ ಜ್ವಾಲಾಮುಖಿಯ ಒತ್ತಡದಿಂದ ಭೂ ಖಂಡಗಳ ಚಲನೆ ಹಾಗೂ ಸವೆತ ಎರಡೂ ಉಂಟಾಗಿ ಈಗಿನ ಆಫ್ರಿಕಾ, ಉತ್ತರ ಹಾಗೂ ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಏಷ್ಯಾ ಮುಂತಾದ ಭೂ‌ಭಾಗಗಳು ನಿರ್ದಿಷ್ಟ ಮಾರ್ಗದಲ್ಲಿ ನಿರ್ದಿಷ್ಟ ವೇಗದಲ್ಲಿ ಚದುರಿ ಪ್ರತ್ಯೇಕಗೊಂಡವು.

ಇಲ್ಲಿಂದ ಐನೂರು ಮಿಲಿಯನ್ ವರ್ಷಗಳ ಹಿಂದೆ ಇದ್ದ ಒಂದೇ ಬೃಹತ್ ಭೂಖಂಡವನ್ನ ಗೊಂಡ್ವಾನಾ ಖಂಡವೆಂದೂ, ಅದರ ನಂತರದ ಭೂ ಖಂಡವನ್ನ ಪ್ಯಾಂಗೇ ಖಂಡವೆಂದೂ, ಅದರ ನಂತರದ ಭೂ ಖಂಡಗಳ ಸಮೂಹವನ್ನ ಲಾರೇಶಿಯಾ ಎಂದೂ, ಅದರ ಬಳಿಕದ ಭೂಖಂಡದ ಸಮಯವನ್ನ ಜುರಾಸಿಕ್ ಯುಗವೆಂದೂ ಕರೆಯಲಾಗಿದೆ.

ಜುರಾಸಿಕ್ ಎಂದರೆ ನೂರು ಮಿಲಿಯನ್ ವರ್ಷಗಳ ಹಿಂದೆ ದೈತ್ಯ ಉರಗಗಳು ಇದ್ದ ಕಾಲ. ಉಲ್ಕೆಯ ದಾಳಿಯಿಂದ ಈ ಉರಗಗಳ ನಾಮಾವಶೇಷದ ಬಳಿಕ ಪುನಃ ಭೂ ಖಂಡವು ಅನೇಕ ಹಿಮ ಹಾಗೂ ಉಷ್ಣಯುಗಗಳನ್ನ ನಿರಂತರವಾಗಿ ಎದುರಿಸಿ ಪ್ರಸಕ್ತ ಈಗಿನ ರೂಪಕ್ಕೆ ಬಂದಿದೆ. ಜುರಾಸಿಕ್ ಯುಗದಲ್ಲಿ ಭಾರತ ಭೂ ಖಂಡವು ಆಸ್ಟ್ರೇಲಿಯಾಗೆ ಅಂಟಿಕೊಂಡೇ ಇತ್ತು ಎಂದರೆ ನೀವು ನಂಬಲೆಬೇಕು ! ಈ ಆಸ್ಟ್ರೇಲಿಯಾ ಭಾಗಕ್ಕೇ ಅಂಟಿಕೊಂಡಿದ್ದ ಈ ಭೂಭಾಗವನ್ನ ದಕ್ಷಿಣದಿಂದ ಮುನ್ನುಗ್ಗಿ ಹರಿದು ಬಂದು ಸಾಗರದ ನೀರು ಸೀಳಿ ಅದನ್ನ ಎರಡು ಭಾಗ ಮಾಡಿದವು. ಒಂದು ಭಾಗವು ಪೂರ್ವದ ಕೆಳಕ್ಕೆ ಸಾಗುತ್ತಾ ಅಲ್ಲಿದ್ದ ಸಣ್ಣ ಪುಟ್ಟ ದ್ವೀಪಸಮುಚ್ಛಯಗಳನ್ನ ಸೇರಿಸಿಕೊಂಡು ಈಗಿನ ಆಸ್ಟ್ರೇಲಿಯಾ ಆಗಿದೆ.

ಇನ್ನು ಭಾರತವು ಕೆಳಗಿನ ನೀರಿನ ತಳ್ಳುವಿಕೆಯಿಂದ ಮೇಲೆಮೇಲಕ್ಕೆ ಸಾಗುತ್ತಾ ಬಂದು ಏಷ್ಯಾದ ರಾಷ್ಟ್ರವಾಗಿ ಚೀನಾ ಹಾಗೂ ರಷ್ಯಾಗಳ‌ ಭೂ ಭಾಗದತ್ತ ಒತ್ತುಕೊಂಡಿತು. ಇಲ್ಲಿ ಒಂದು ಅಚ್ಚರಿ ನಡೆಯಿತು. ಮೇಲಿನ ಯುರೇಷಿಯಾದ ಭೂಭಾಗವು ದಕ್ಷಿಣಕ್ಕು ಹಾಗೂ ಭರತ ಖಂಡವು ಮೇಲಕ್ಕು ಪರಸ್ಪರ ಡಿಕ್ಕಿ ಹೊಡೆದು ಘರ್ಷಣೆ ಏರ್ಪಟ್ಟಾಗ ಈಗಿನ ಹಿಮಾಲಯ ಇರುವ ಜಾಗದಲ್ಲಿ ಕೆಳಗಿದ್ದ ಭೂ ಪ್ರದೇಶ ಮೇಲಕ್ಕೆ ಏರುತ್ತಾ ಬಂತು. ಅದರ ಫಲವೆ ಹಿಮಾಲಯಗಳ ಜನನ. ಹೀಗೆ ಲಕ್ಷಾಂತರ ವರ್ಷಗಳಲ್ಲಿ ಏರುತ್ತಾ ಬೆಳೆದು ಬಂದು ಈ ಥಂಡ್ರಾ ಪ್ರದೇಶವೇ ಈಗಿನ ಹಿಮಾಲಯ ಆಗಿದೆ ಎನ್ನುತ್ತವೆ ಆಧುನಿಕ ಭೂ ತಜ್ಞರ ವರದಿಗಳು.

ಈಗಲು ಸಹ ಭಾರತವು ಮೇಲಕ್ಕೆ ಒತ್ತುತ್ತಲೆ ಇದೆ. ಪ್ರತೀ ವರ್ಷ ಹಿಮಾಲಯಗಳು ಎರಡಿಂಚು ಎತ್ತರಕ್ಕೆ ಬೆಳೆಯುತ್ತಿರುವುದೇ ಇದಕ್ಕೆ ಸಾಕ್ಷಿ. ಇನ್ನೊಂದು ಅಚ್ಚರಿದಾಯಕ ಅಂಶವೆಂದರೆ, ಭರತ ಖಂಡದ ದಕ್ಷಿಣದ ಈಗಿನ ಚಾಮುಂಡಿ ಬೆಟ್ಟವು ನೈಸರ್ಗಿಕವಾಗಿ ಹಿಮಾಲಯಗಳಿಗಿಂತ ಸಾಕಷ್ಟು ವರ್ಷ ಹಳೆಯದು. ಅಧ್ಯಯನಗಳ ಪ್ರಕಾರ ಚಾಮುಂಡಿ ಬೆಟ್ಟಗಳ ಕಲ್ಲುಗಳ ಕಾರ್ಬನ್ ಡೇಟಿಂಗ್ ವಿಧಾನದ ಪರೀಕ್ಷಾ ವರದಿಗಳು ಚಾಮುಂಡಿ ಬೆಟ್ಟವು ಸುಮಾರು 85 ಕೋಟಿ ವರ್ಷಗಳಷ್ಟು ಹಳೆಯದ್ದೆಂದು ಧೃಡ ಪಡಿಸಿವೆ. ಅಂದರೆ ಹಿಮಾಲಯಗಳಿಗಿಂತಲು 83 ಕೋಟಿ ವರ್ಷಗಳಷ್ಟು ಅವು ಹಿರಿಯವು.

ಭೂಮಿ ಇಷ್ಟೆಲ್ಲ ಸ್ವರೂಪ ತಾಳಲು ಕೋಟಿಗಟ್ಟಲೆ ವರ್ಷಗಳ ಸಮಯಾವಕಾಶ ಬೇಕೆಂಬುದು ತಜ್ಞರ ಅಭಿಪ್ರಾಯ. ಇನ್ನು ಮುಂದಕ್ಕು ಸಹ ಭೂಮಿಯ ರಚನೆ ಬದಲಾಗುತ್ತಾ ಹೋಗಲಿದೆ. ಭೂ ಖಂಡಾಂತರ ಚಲನೆಯ ಸಿದ್ಧಾಂತವು ಇಂದು ಜಾಗತಿಕ ಮಟ್ಟದಲ್ಲಿ ಒಪ್ಪಿತವಾದ ಹಾಗೂ ಧೃಡೀಕರಿಸಲ್ಪಟ್ಟ ವಾದ. ಇಂಥ ಅಚ್ಚರಿದಾಯಕ ಸತ್ಯಗಳ ಬಗ್ಗೆ ಜನ ಜಾಗೃತಿ ಮೂಡಿಸಿ ಭೂಮಿಯ ಸಂರಕ್ಷಣೆಯ ಅರಿವನ್ನ ಜನರಲ್ಲಿ ಸಾಧಿಸುವುದು ಪ್ರತಿಯೊಬ್ಬ ವಿದ್ಯಾವಂತನ ಕರ್ತವ್ಯ.

ಸಂಗ್ರಹ ಲೇಖನ:-
-ಇಂದೂದರ್ ಒಡೆಯರ್ ಚಿತ್ರದುರ್ಗ
(ಡುಗ್ಗು)

Tags: birth of Himalayasclassical mythologycontinental driftcrown of India.HimalayasVedic mythology
ShareTweetSendShare
Join us on:

Related Posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

by Shwetha
March 11, 2026
0

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅಥವಾ ವಿದೇಶಿ ಗಣ್ಯರು ಭಾರತಕ್ಕೆ...

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

by Shwetha
March 11, 2026
0

ಕುಟುಂಬದ ಆಸ್ತಿ ವಿವಾದಗಳನ್ನು ಬಗೆಹರಿಸಲು, ಪಿಂಚಣಿ ಸೌಲಭ್ಯ ಪಡೆಯಲು ಹಾಗೂ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣಪತ್ರ ಅತ್ಯಂತ ಪ್ರಮುಖ ಹಾಗೂ...

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

by Shwetha
March 11, 2026
0

ಕಲಬುರಗಿ: ಗ್ರಾಮೀಣ ಭಾಗಗಳಲ್ಲಿ ಮುಗ್ಧ ಹಾಗೂ ಬಡ ಜನರನ್ನು ಗುರಿಯಾಗಿಸಿಕೊಂಡು ಸದ್ದಿಲ್ಲದೆ ನಡೆಯುತ್ತಿದ್ದ ವ್ಯವಸ್ಥಿತ ಮತಾಂತರದ ಜಾಲವೊಂದನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಿಟ್ಟತನದಿಂದ ಬಯಲಿಗೆಳೆದಿದ್ದಾರೆ. ಕಲಬುರಗಿ...

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

by Shwetha
March 11, 2026
0

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ತಳಮಟ್ಟದಲ್ಲಿ ಪೂರೈಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ರಾಷ್ಟ್ರೀಯ ರೆಸ್ಟೋರೆಂಟ್...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

by Shwetha
March 11, 2026
0

ದೇಶದ ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವ NCERT ವಿವಾದದ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿವಾದಿತ ಅಧ್ಯಾಯವನ್ನು ಮಾತ್ರವಲ್ಲದೆ, ಇಡೀ ಪುಸ್ತಕವನ್ನೇ ಹಿಂಪಡೆಯಲು ಸಂಸ್ಥೆ ಮುಂದಾಗಿದೆ. ಈ ಬಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram