ಕೋಲಾರ : ಗ್ರೀನ್ ಜೋನ್ ನಲ್ಲಿದ್ದ ಕೋಲಾರಕ್ಕೆ ಕೊರೋನಾ ಹೊತ್ತುತಂದ್ದೇ ಡ್ರೈವರ್ ಗಳು ಎಂಬ ವಿಚಾರ ಕುರಿತಾಗಿ ಈಗ ಜಿಲ್ಲೆಯಾದ್ಯಂತ ಚರ್ಚೆ ನಡೆಯುತ್ತಿದೆ. ಈಗಾಗಲೇ ಪತ್ತೆಯಾಗಿರುವ ಒಟ್ಟು ೧೩ ಪ್ರಕರಣಗಳಲ್ಲಿ ೧೧ ಕ್ಕೂ ಹೆಚ್ಚು ಪ್ರಕರಣಗಳು ಡ್ರೈವರ್ ಹಾಗೂ ಅವರ ಕುಟುಂಬಗಳಿಂದಲೇ ದೃಡಪಟ್ಟಿವೆ. ಇಷ್ಟೂ ಜನ ಚಾಲಕರು ಒರಿಸ್ಸಾ, ಮುಂಬೈ ಹಾಗೂ ಚೆನೈ ಮುಂತಾದ ಕಡೆಗಳಲ್ಲಿ ಡ್ರೈವರ್ ಕೆಸ ಮಾಡುತ್ತಿದ್ದರು. ಇತ್ತೀಚೆಗೆ ಬಂಗಾರ ಪೇಟೆ ಮೂಲದ ಚಾಲಕನೊಬ್ಬನಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ತನ್ನ ಅತ್ತೆ ಹಾಗೂ ಪುತ್ರನಿಗೂ ಪಾಸಿಟಿವ್ ಬರುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಲಾಗ್ತಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆಯ p-1587 ಸೋಂಕಿನ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಯಲ್ಲಿ ಸೋಂಕಿನ ಶಂಕೆ ವ್ಯಕ್ತವಾಗಿದ್ದು ಈ ವ್ಯಕ್ತಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜಿಲ್ಲಾಡಳಿತಕ್ಕೆ ಮತ್ತಷ್ಟು ಆತಂಕ ಹೆಚ್ಚಾಗಿದೆ. ಕೋಲಾರದಿಂದ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಗೆ ಅಪಾರ ಪ್ರಮಾಣದ ತರಕಾರಿ ಇಲ್ಲಿಂದಲೇ ಸರಬರಾಜು ಆಗುತ್ತಿದ್ದು, ಸದ್ಯ ಕೊರೋನಾ ಸಹ ಇವರ ಮೂಲಕವೇ ಪ್ರಯಾಣ ಸಾಗಿಸುತ್ತಿದೆ. ಇನ್ನೂ P-1587 ಸೋಂಕಿನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬಂಗಾರಪೇಟೆಯ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಈಗಾಗಲೇ.
ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಒಟ್ಟಾರೆ ಕೋಲಾರಕ್ಕೆ ಚಾಲಕರ ಮೂಲಕ ಕೊರೋನಾ ರಾಕ್ಷಸಿಬ ಕಾಲಿಡುತ್ತಿದ್ದು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೇರಿದಂತೆ ಎಪಿಎಂಸಿ ಅಧಿಕಾರ ಎಷ್ಟೇ ನಿಗಾ ವಹಿಸಿದರೂ ಕೊರೋನಾ ತನ್ನ ರಾಕ್ಷಸಿ ರೂಪವನ್ನು ತಾಳುತ್ತಿದೆ. ಉಳಿದಂತೆ ಮಹಾರಾಷ್ಟ್ರ ಹಾಗೂ ವಿದೇಶಗಳಿಂದ ಬಂದ ಸಾವಿರಾರು ಮಂದಿಯನ್ನು ಈಗಾಗಲೇ ಜಿಲ್ಲಾಡಳಿತ ಕ್ವಾರೆಂಟೈನ್ ಮಾಡಿದೆ. ಒಂದೆರಡು ದಿನಗಳಲ್ಲಿ ಸಾವಿರಾರು ಮಂದಿಯ ತಪಾಸಣೆ ವರದಿ ಬರಲಿದ್ದು, ಸೋಂಕಿತರ ಸಂಖ್ಯೆ ಎಲ್ಲಿ ಹೆಚ್ಚಾಗುತ್ತೋ ಅಂತ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ.








