ಚೀನಾದ ಕೋವಿಡ್ ಲಸಿಕೆ ಪಡೆದ ದೇಶಗಳಲ್ಲಿ ಕೊರೊನಾ ಹಾವಳಿ ಹೆಚ್ಚಳ
ಅಮೆರಿಕಾ : ಕೊರೊನಾ ಮಹಾಮಾರಿಯನ್ನ ಇಡೀ ದೇಶಕ್ಕೆ ಹಂಚಿ ಕೋಟ್ಯಾಂತರ ಜನರ ಸಾವಿಗೆ ಕಾರಣ ಎಂಬ ಹಣೆಪಟ್ಟಿ ಹೊಂದಿರುವ ಚೀನಾ ಈಗ ವ್ಯಾಕ್ಸಿನ್ ವಿಚಾರದಲ್ಲೂ ತನ್ನ ಮರ್ಯಾದೆ ಕಳೆದುಕೊಂಡಿದೆ… ಚೀನಾದ ಯಾವ ವಸ್ತುಗಳ ಮೇಲೂ ನಂಬದ ಇಡೀ ವಿಶ್ವದಲ್ಲಿ , ಚೀನಾದಿಂದ ಬಮದಿರುವ ಒಂದೇ ಒಂದು ಕ್ವಾಲಿಟಿ ಪ್ರಡಕ್ಟ್ ಅಂದ್ರೆ ಅದು ಕೊರೊನಾ ವೈರಸ್ ಮಾತ್ರ.. ವಿಶ್ವದ ಜನರಿಗೆ ಚೀನಾ, ಅಲ್ಲಿನ ವಸ್ತುಗಳ ಮೇಲೆ ನಂಬಿಕೆಯಿಲ್ಲ.. ಇನ್ನೂ ಅಲ್ಲಿನ ಕೋವಿಡ್ ವ್ಯಾಕ್ಸಿನ್ ಮೇಲಂತೂ ಹೆಚ್ಚು ಜನರಿಗೆ ವಿಶ್ವಾಸವಿಲ್ಲ.. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಸೌದಿ ಅರೇಬಿಯಾ ಚೀನಾದ ಲಸಿಕೆ ಪಡೆದ ವಿದೇಶಿಗರನ್ನ ತಮ್ಮ ದೇಶಕ್ಕೆ ಪ್ರವಾಸವನ್ನ ನಿರ್ಬಂಧಿಸಿದೆ..
ಸಿನೋಫಾರ್ಮ ಮತ್ತು ಸಿನೋವ್ಯಾಕ್ ಹೆಸರಿನ ಎರಡು ಲಸಿಕೆಗಳನ್ನು ಅಭಿವೃದ್ಧಿ ಪಡಿಸಿರುವ ಚೀನಾ ತನ್ನ ಆಪ್ತ ರಾಷ್ಟ್ರಗಳಿಗೆ ಹಂಚಿಕೆ ಮಾಡಿದೆ. ಈ ಪೈಕಿ ಸೀಶೆಲ್ಸ್, ಚಿಲಿ, ಬಹರೇನ್ ಮತ್ತು ಮಂಗೋಲಿಯಾದಲ್ಲಿ ಕನಿಷ್ಟ ಒಂದು ಡೋಸ್ ಲಸಿಕೆ ನೀಡಿದ್ದರೂ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿನ ಪ್ರಮಾಣ ಈಗಲೂ ಹೆಚ್ಚಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಕಳೆದ ವಾರ ಅತಿ ಹೆಚ್ಚು ಕೊರೊನಾ ಪೀಡಿತ ರಾಷ್ಟ್ರಗಳಲ್ಲಿ ಈ 4 ರಾಷ್ಟ್ರಗಳು ಟಾಪ್ 10 ಪಟ್ಟಿಯಲ್ಲಿದೆ. ಸೀಶೆಲ್ಸ್ ನಲ್ಲಿ 10 ಲಕ್ಷ ಜನಸಂಖ್ಯೆಗೆ 716 ಪ್ರಕರಣಗಳು ಪತ್ತೆ ಆಗುತ್ತಿದೆ. ಮಂಗೋಲಿಯಾದಲ್ಲಿ ಶೇ.52ರಷ್ಟುಜನರಿಗೆ ಪೂರ್ಣ ಪ್ರಮಾಣದ ಲಸಿಕೆ ನೀಡಿದ್ದರೂ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ..
ಇನ್ನಮೂ ವಿಶ್ವದ ಇತರ ಲಸಿಕೆಗಳಿಗೆ ಹೋಲಿಸಿದರೆ ರೂಪಾಂತರಿ ವೈರಸ್ ವಿರುದ್ಧ ಚೀನಾ ಲಸಿಕೆಗಳು ಅಷ್ಟೇನು ಪರಿಣಾಮಕಾರಿಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಿನೋಫಾರ್ಮಾ ಲಸಿಕೆ ಕೋವಿಡ್ ವಿರುದ್ಧ ಶೇ.78ರಷ್ಟು ಮತ್ತು ಸಿನೋವ್ಯಾಕ್ ಕೇವಲ ಶೇ.51ರಷ್ಟು ಮಾತ್ರ ಪರಿಣಾಮಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಾಂಕಾಂಗ್ ವಿಶ್ವವಿದ್ಯಾಲಯದ ವೈರಸ್ ತಜ್ಞ ಜಿನ್ ಡಾಂಗ್ಯಾನ್ ಪ್ರತಿಕ್ರಿಯಿಸಿ, ಲಸಿಕೆ ಉತ್ತಮವಾಗಿದ್ದರೆ ಈ ರೀತಿಯಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಕಾಣುವುದಿಲ್ಲ.
ಕೊರೊನಾ ಹೆಚ್ಚಾಗಲು ಚೀನಾ ಜವಾಬ್ದಾರಿ ಹೊರಬೇಕು ಎಂದು ಹೇಳಿದ್ದಾರೆ. ಇಲ್ಲಿಯವರೆಗೆ 90 ದೇಶಗಳಿಗೆ ಚೀನಾ ಲಸಿಕೆಯನ್ನು ರಫ್ತು ಮಾಡಿದೆ. ಬಹರೇನ್ ಮತ್ತು ಯುಎಇ ದೇಶಗಳು ಕ್ಲಿನಿಕಲ್ ಪ್ರಯೋಗದ ಅಂತಿಮ ವರದಿಗೂ ಮುನ್ನವೇ ಸಿನೋಫಾರ್ಮಾ ಲಸಿಕೆಗೆ ಅನುಮೋದನೆ ನೀಡಿತ್ತು. ಆದರೂ ಈ ಲಸಿಕೆ ಪಡೆದ ಮಂದಿ ಕೊರೊನಾಗೆ ತುತ್ತಾಗುತ್ತಿದ್ದಾರೆ ಎಂದು ವರದಿಯಾಗಿದೆ.