ದೇಶದ ಆರ್ಥಿಕತೆ ಚೇತರಿಕೆಗೊಳ್ಳಲು ಒಂದು ದಶಕಕ್ಕೂ ಹೆಚ್ಚು ಸಮಯ ಬೇಕು : RBI
ಮುಂಬಯಿ: ಕೊರೊನಾ ರೋಗದಿಂದ ಭಾರತದ ಆರ್ಥಿಕತೆ ದೊಡ್ಡ ಹೊಡೆತ ಬಿದ್ದಿದ್ದು, ಮತ್ತೇ ಮೊದಲಿನಂತೆ ಚೇತರಿಕೆಗೊಳ್ಳಲು ಒಂದು ದಶಕಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ವರದಿ ತಿಳಿಸಿದೆ.
ದೇಶದ ಆರ್ಥಿಕತೆಯ ಮೇಲೆ ಕೊರೊನಾದ ಪರಿಣಾಮ ವಿಶ್ಲೇಷಣೆ ಮಾಡಿರುವ ವರದಿಯು, ಸಾಂಕ್ರಾಮಿಕ ಅವಧಿಯಲ್ಲಿ ಸುಮಾರು 52 ಲಕ್ಷ ಕೋಟಿ ರೂಪಾಯಿ ಉತ್ಪಾದನೆಯ ನಷ್ಟವಾಗಿದೆ. ಕೊರೊನಾದ ಅಲೆಗಳಿಂದ ಉಂಟಾದ ಪ್ರಕ್ಷುಬ್ಧತೆಗಳು ಚೇತರಿಕೆಯ ಹಾದಿಗೆ ಬಂದಿವೆ.
ಹಾಗೇ ಜಿಡಿಪಿಯಲ್ಲಿನ ತ್ರೈಮಾಸಿಕ ಪ್ರವೃತ್ತಿಗಳು ಮೂಲಭೂತವಾಗಿ ಸಾಂಕ್ರಾಮಿಕದ ಪ್ರಭಾವಗಳನ್ನು ಅನುಸರಿಸುತ್ತವೆ ಎಂದು 2021-22ರ ಕರೆನ್ಸಿ ಮತ್ತು ಹಣಕಾಸು ವರದಿಯಲ್ಲಿನ ‘Scars of the Pandemic’ ಅಧ್ಯಾಯ ಹೇಳಿದೆ.
2020-21ರ ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತ ಕಂಡ ಆರ್ಥಿಕ ಬೆಳವಣಿಗೆಯು ನಂತರದಲ್ಲಿ ಚೇತರಿಕೆಯ ಹಾದಿಗೆ ಮರಳಿತ್ತು. ಆದರೆ 2021-22ರ ಏಪ್ರಿಲ್-ಜೂನ್ ಅವಧಿಯಲ್ಲಿ ಎರಡನೇ ಅಲೆಯ ಕಾರಣದಿಂದ ಆರ್ಥಿಕ ಚೇತರಿಕೆಯು ಇಳಿಕೆಯ ಹಾದಿ ಹಿಡಿಯಿತು.
2022ರಲ್ಲಿ ಜನವರಿಯಲ್ಲಿ ಮೂರನೇ ಅಲೆ ಕಾರಣದಿಂದ ಆರ್ಥಿಕ ಚೇತರಿಕೆಗೆ ಮತ್ತಷ್ಟು ಹಿನ್ನಡೆಯಾಯಿತು ಎಂದಿದೆ.