ದುಡ್ಡು ಮಾಡೋ ಶಾರ್ಟ್ ಕಟ್ : ದಂಪತಿಗೆ ಯಾವ ಗತಿ ಬಂತು ನೋಡಿ..! ಡೇಟಿಂಗ್ ಆಪ್ ಬಗ್ಗೆ ಎಚ್ಚರವಿರಲಿ..!
ವಿಜಯವಾಡ: ಆರ್ಥಿಕ ಸಂಕಷ್ಟದಲ್ಲಿದ್ದ ದಂಪತಿ ದುಡ್ಡ ಮಾಡಲು ಶಾರ್ಟ್ ಕಟ್ ಹುಡುಕಿಕೊಂಡಿದ್ದರು. ಅದೇ ಡೇಟಿಂಗ್ ಆಪ್. ಡೇಟಿಂಗ್ ಆಪ್ ಮೂಲಕ ಅನೇಕರನ್ನ ವಂಚಿಸಿರುವ ಖತರ್ನಾಕ್ ದಂಪತಿ ಇದೀಗ ಶ್ರೀ ಕೃಷ್ಣ ಜನ್ಮಸ್ಥಾನಕ್ಕೆ ಸೇರಿದ್ದಾರೆ. ಹೌದು ಡೇಟಿಂಗ್ ಆಪ್ ಮೂಲಕ ಅವಿವಾಹಿತ ಪುರುಷರನ್ನು ಟಾರ್ಗೆಟ್ ಮಾಡುತ್ತಿದ್ದ ಈ ದಂಪತಿಯನ್ನ ಇದೀಗ ಹೈದರಾಬಾದ್ ನ ರಾಚಕೊಂಡ ಪೊಲೀಸರು ಬಂಧಿಸಿ ಕಂಬಿ ಹಿಂದೆ ಹಾಕಿದ್ದಾರೆ.
ಸದ್ಯ ವ್ಯಕ್ತಿಯೊಬ್ಬನಿಗೆ 21 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ ತನಿಖೆ ನಡೆಸಿದಾಗ ಈ ಖತರ್ನಾಕ್ ದಂಪತಿಯ ಅಸಲಿಯತ್ತು ಬಟಾಬಯಲಾಗಿದೆ. ಕೂಡಲೇ ಇಬ್ಬರನ್ನು ಸಹ ಬಂಧಿಸಲಾಗಿದೆ. ವಿಜಯವಾಡ ಮೂಲದ 30 ವರ್ಷದ ಕಂಪಾ ಹರಿದಯಾನಂದ ಮತ್ತು 20 ವರ್ಷದ ಹರಿಕಾ ಬಂಧಿತರಾಗಿದ್ದಾರೆ. ಈ ಜೋಡಿ 2017ರಲ್ಲಿ ಮದುವೆಯಾಗಿತ್ತು. ಇನ್ನೂ ಹರಿಕಾಗೆ ಈ ಹಿಂದೆಯೇ ಮದುವೆಯಾಗಿ ಡೈವೋರ್ಸ್ ಆಗಿತ್ತು. ನಂತರ ಕಂಪಾನನ್ನು ಮದುವೆಯಾಗಿದ್ದಳು.
ಅನುಷಾ ಹೈದರಾಬಾದ್ನ ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಸಂಬಳ ಸಾಕಾಗದೇ ಕಂಗಾಲಾಗಿದ್ದರು. ಹೀಗಾಗಿ ದುಡ್ಡು ಮಾಡೋಕೆ ಈ ದಂಪತಿ ಮಾಸ್ಟರ್ ಪ್ಲಾನ್ ಮಾಡಿದ್ದರು. ಡೇಟಿಂಗ್ ಆಯಪ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಅವಿವಾಹಿತ ಪುರುಷರು ಅದ್ರಲ್ಲೂ ಶ್ರೀಮಂತರನ್ನೇ ಈ ಜೋಡಿ ಟಾರ್ಗೆಟ್ ಮಾಡಲು ಆರಂಭಿಸಿದೆ. ಇಂಡಿಯನ್ ಡೇಟಿಂಗ್.ಕಾಮ್ ಆಪ್ನಲ್ಲಿ ರೋಸಾರಿಯೋ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪ್ರೋಫೈಲ್ ಗೆ ಯಾರೋ ಅಂದದ ಹುಡುಗಿಯ ಫೋಟೋ ಅಪ್ಲೋಡ್ ಮಾಡಿ ಗಾಳ ಹಾಕಲು ಶುರು ಮಾಡಿದ್ದಾರೆ. ಇನ್ನೂ ನಕಲಿ ಪ್ರೊಫೈಲ್ ಗೆ ಮರುಳಾಗಿ ಹಳ್ಳಕ್ಕೆ ಬೀಳ್ತಿದ್ದ ಯುವಕರು ಮಸೇಜ್ ಮಾಡಲಾರಂಭಿಸಿದ್ದಾರೆ. ಅವರ ಮೆಸೇಜ್ ಗಳಿಗೆ ಕಂಪಾ ಹರಿಯಾನಂದ್ ಹೆಣ್ಣಿನ ಹೆಸರಲ್ಲಿ ಚಾಟ್ ಮಾಡುತ್ತಿದ್ದ.
ಗೋವಾ ಶಿಪ್ಯಾರ್ಡ್ನಿಂದ 12 ವೇಗದ ಗಸ್ತು ದೋಣಿಗಳನ್ನು ಖರೀದಿಸಲು ಭಾರತೀಯ ಸೇನೆ ನಿರ್ಧಾರ
ಈ ನಡುವೆ ಈ ದಂಪತಿಯ ಗಾಳಕ್ಕೆ ಸಿಲುಕಿದ್ದು, ಹೈದರಾಬಾದ್ನ ನಾರದಪೇಟ್ ಮೂಲದ ವ್ಯಕ್ತಿ ಡೊನಾಲ್ಡ್. ಡೇಟಿಂಗ್ ಆಯಪ್ ನಲ್ಲಿ ಪರಿಚಿತನಾಗಿದ್ದ ಈತನ ಜೊತೆ ಹುಡುಗಿಯ ರೀತಿ ಹರಿಯಾನಂದ ಚಾಟ್ ಮಾಡ್ತಿದ್ದ. ಸಕ್ಕರೆಯಂತಹ ಮಾತುಗಳನ್ನಾಡಿ ಡೊನಾಲ್ಡ್ ನನ್ನ ನಂಬಿಸಿದ್ದ. ಬಳಿಕ ಸಮಯ ನೋಡಿ ಹರಿಯಾನಂದ ದುಡ್ಡು ಕೀಳುವ ಪ್ಲಾನ್ ನಡೆಸಿದ್ದಾನೆ. ಅದರಂತೆ ತನ್ನ ತಾಯಿಯ ಆರೋಗ್ಯ ಸರಿಯಿಲ್ಲ. ಹೃಯದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಪರೇಷನ್ ಮಾಡಿಸಬೇಕೆಂದು ಹೇಳಿ ಹಣದ ನೆರವು ಕೇಳಿದ್ದಾನೆ. ಅದನ್ನು ನಂಬಿದ ಡೊನಾಲ್ಡ್ ಹಣವನ್ನು ಕಳುಹಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗಿಲ್ಲ. ಬಳಿಕ ತನ್ನ ತಾಯಿ ಸತ್ತುಹೋಗಿದ್ದಾಳೆ ಎಂದು ಹೇಳಿ ಮತ್ತಷ್ಟು ಹಣ ಪೀಕಿದ್ದಾನೆ. ಹೀಗೆ ಸುಮಾರು 21 ಲಕ್ಷ ರೂ. ಹಣವನ್ನು ದೋಚಿದ್ದಾನೆ. ಆದ್ರೆ ಮದುವೆ ವಿಚಾರದ ಬಗ್ಗೆ ಡೊನಾಲ್ಡ್ ಮಾತನಾಡಿದಾಗೆಲ್ಲಾ ಏನಾದರೂ ಒಂದು ನೆಪ ಹೇಳಿ ಹರಿಯಾನಂದ ತಪ್ಪಿಸದಿಕೊಳ್ತಿದ್ದ. ಪದೇ ಪದೇ ಹಣ ಕೇಳ್ತಿದ್ದ. ಈ ವರ್ತನೆಯಿಂದಾಗಿ ಅನುಮಾನಗೊಂಡ ಡೊನಾಲ್ಡ್, ಈ ಕುರಿತಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಖತರ್ನಾಕ್ ದಂಪತಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
`ತಮ್ಮ ರಾಜೀನಾಮೆ ಹಿಂದಿನ ರಿಯಲ್ ಸ್ಟೋರಿ’ಯನ್ನ ಬಿಚ್ಚಿಟ್ಟ `ಸಿಂಗಂ’
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel