ನವದಹಲಿ: ಹೆಮ್ಮಾರಿ ಕೊರೊನಾಗೆ ಮೂಗುದಾರ ಹಾಕಲು ದಿನಗಣನೆ ಆರಂಭವಾಗಿದೆ. ಇಂಗ್ಲೆಂಡ್ ಬಳಿಕ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ತಜ್ಞರ ಸಮಿತಿ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಆದರೆ, ಲಸಿಕೆ ಬಳಕೆಗೆ ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ)ದ ಅನುಮತಿಯೊಂದೇ ಬಾಕಿ ಇದೆ. ಡಿಸಿಜಿಐ ಅನುಮತಿ ಸಿಗುತ್ತಿದ್ದಂತೆ ದೇಶಾದ್ಯಂತ ಹೆಮ್ಮಾರಿ ಕೊರೊನಾಗೆ ಲಸಿಕೆ ನೀಡುವ ಕೆಲಸ ದೇಶಾದ್ಯಂತ ಆರಂಭವಾಗಲಿದೆ.
ಅಸ್ತ್ರಜೆನಿಕಾ, ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಪುಣೆಯ ಸೀರಮ್ ಇನ್ಸಿಟ್ಯೂಟ್ಟ್ ನಲ್ಲಿ ಕೋವಿಶೀಲ್ಡ್ ಸಿದ್ಧಪಡಿಸಲಾಗಿದೆ. ಕೋವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ಇಂಗ್ಲೆಂಡ್ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಮುಂದಿನ ವಾರದಿಂದಲೇ ಇಂಗ್ಲೆಂಡ್‍ನಲ್ಲಿ ಕೋವಿಶೀಲ್ಡ್ ಲಸಿಕೆ ನೀಡುವ ಆಂದೋಲನ ಕೂಡ ಆರಂಭವಾಗಲಿದೆ.
ಇದರ ಬೆನ್ನಲ್ಲೇ, ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲೂ ಬಳಕೆಗೆ ಅನುಮತಿ ನೀಡುವಂತೆ ಅಸ್ತ್ರಜೆನಿಕಾ ಕಂಪನಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಸ್ವೀಕರಿಸಿದ್ದ ಕೇಂದ್ರ ಸರ್ಕಾರ, ಲಸಿಕೆಯ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಡಿಸಿಜಿಐ, ತಜ್ಞರ ಸಮಿತಿಗೆ ಸೂಚಿಸಿತ್ತು. ನಿನ್ನೆಯಿಂದ ತಜ್ಞರ ಸಮಿತಿ ಸುದೀರ್ಘ ಪರಾಮರ್ಶೆ ನಡೆಸಿ ಕೋವಿಶೀಲ್ಡ್ ಲಸಿಕೆಯನ್ನು ಕೊರೊನಾಗೆ ತುರ್ತು ಬಳಕೆಗೆ ಅನುಮತಿ ನೀಡಬಹುದು ಎಂದು ಡಿಸಿಜಿಐಗೆ ಶಿಫಾರಸು ಮಾಡಿದೆ. ಹೀಗಾಗಿ ಡಿಸಿಜಿಐ ಅನಮತಿಯೊಂದೇ ಬಾಕಿ ಇದ್ದು, ಅಲ್ಲೂ ಒಪ್ಪಿಗೆ ಸಿಕ್ಕರೆ ಕೆಲವೇ ದಿನಗಳಲ್ಲಿ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಬುಧವಾರದಿಂದ ಲಸಿಕೆ ವಿತರಣೆ ಆರಂಭ..?
ಕೋವಿಶೀಲ್ಡ್ ಲಸಿಕೆಗೆ ಗ್ರೀನ್ ಸಿಗ್ನಲ್ ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದ್ದು, ಮುಂದಿನ ಬುಧವಾರದಿಂದಲೇ ಕೊರೊನಾಗೆ ಲಸಿಕೆ ನೀಡುವ ಕೆಲಸ ಆರಂಭವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪುಣೆಯ ಸೀರಮ್ ಇನ್ಸಿಟ್ಯೂಟ್ ನಲ್ಲಿ 5 ಕೋಟಿ ಡೋಸ್ ಸಿದ್ದವಾಗಿದ್ದು, ಇಂದು ತಡರಾತ್ರಿ ಡಿಸಿಜಿಐ ಅನುಮತಿ ಸಿಕ್ಕರೆ ನಾಳೆ ಬೆಳಿಗ್ಗೆಯಿಂದಲೇ ಎಲ್ಲಾ ರಾಜ್ಯಗಳಿಗೂ ಕೋವಿಶೀಲ್ಡ್ ಲಸಿಕೆ ಸಾಗಣೆ ಪ್ರಾರಂಭವಾಗಲಿದೆ.
ನಾಳೆ ದೇಶಾದ್ಯಂತ ಲಸಿಗೆ ಹಂಚಿಕೆ ಸಂಬಂಧ ಡ್ರೈರನ್(ಅಣಕು ಪ್ರದರ್ಶನ) ನಡೆಯಲಿದೆ. ಬೆಂಗಳೂರು, ಕಲಬುರಗಿ, ಶಿವಮೊಗ್ಗ ಸೇರಿದಂತೆ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಲಸಿಕೆ ಡ್ರೈರನ್ ನಡೆಯಲಿದೆ. ಸಕಾಲಕ್ಕೆ ಲಸಿಕೆ ಪೂರೈಕೆ, ಫ್ರೀಜರ್ ಗಳಲ್ಲಿ ಲಸಿಕೆ ಕೆಡದಂತೆ ಕಾಪಾಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆರೋಗ್ಯ ಇಲಾಖೆ ಮಾಡಿಕೊಂಡಿರುಬವ ಸಿದ್ಧತೆಗಳ ಬಗ್ಗೆ ಅಣಕು ಪ್ರದರ್ಶನ ಡ್ರೈರನ್ ನಡೆಯಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel