ವಿಜಯಪುರ: ಬೈಕ್ ಸವಾರನ ಮೇಲೆ ಕ್ರೇನ್ ಹರಿದ ಪರಿಣಾಮ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಮುದ್ದೇಬಿಹಾಳ (Muddebihal) ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ರಾಯಚೂರು (Raichuru) ಜಿಲ್ಲೆಯ ಲಿಂಗಸಗೂರು (Lingasaguru) ತಾಲೂಕಿನ ನಾಗರಹಾಳ ಗ್ರಾಮದ ನಿವಾಸಿ ಶಿವಪುತ್ರಪ್ಪ ಭಜಂತ್ರಿ (40) ಎನ್ನಲಾಗಿದೆ.
ನಗರದ ಹೋಂಡಾ ಶೋರೂಂ ಬಳಿ ಮುದ್ದೇಬಿಹಾಳ-ನಾರಾಯಣಪುರ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪಘಾತವಾಗುತ್ತಿದ್ದಂತೆ ಕ್ರೇನ್ ಚಾಲಕ ಪರಾರಿಯಾಗಿದ್ದಾನೆ. ಆದರೆ, ಕ್ರನ್ ನ್ನು ಸ್ಥಳದಲ್ಲೇ ಬಿಟ್ಟಿದ್ದಾರೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.








