ಕಲಬುರಗಿ : ಕೊರೊನಾ ದಿಂದ ಪಾರಾಗಲು ಸಾಮಾಜಿಕ ಅಂತರವೊಂದೆ ಮಹಾ ಮದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆ ಕಾರಣಕ್ಕಾಗಿಯೇ ಕೊರೊನಾ ಸೋಂಕಿತರನ್ನು ಕ್ವಾರೆಂಟೈನ್ ಮಾಡುವ ಪದ್ದತಿಯನ್ನು ಜಾರಿ ಮಾಡಲಾಗಿದೆ. ಅಲ್ಲದೆ ಕ್ವಾರೆಂಟೈನ್ ನಲ್ಲಿ ಇದ್ದವರಿಗೆ ಸೌಲಭ್ಯಗಳನ್ನು ಸರ್ಕಾರವೇ ಪೂರೈಸಬೇಕು. ಜೊತೆಗೆ ಕ್ವಾರೆಂಟೈನ್ ನಲ್ಲಿದ್ದವರಿಗೆ ಟೆಸ್ಟ್ ಮಾಡಬೇಕು. ಆದರೆ ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ಕ್ವಾರಂಟೈನ್ ಕೇಂದ್ರಗಳಲ್ಲಿನ ನಿವಾಸಿಗಳ ಗೋಳು ಕೇಳೊರಿಲ್ಲ-ಹೇಳೋರಿಲ್ಲ ಎಂಬಂತೆ ಆಗಿದೆ. ಸರ್ಕಾರದ ನಿರ್ಲಕ್ಷ್ಯತನದಿಂದ ಕ್ವಾರಂಟೈನ್ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಕ್ವಾರಂಟೈನ್ ಅವಧಿ ಮಗಿದ ಬಳಿಕ ಪರೀಕ್ಷೆ ನಡೆಸಬೇಕು. ಈ ವಿಚಾರದಲ್ಲಿ ಕಲಬುರಗಿ ಜಿಲ್ಲೆಯಲ್ಲಿರು ಅಧಿಕಾರಗಳು ನಿರ್ಲಕ್ಷ್ಯತನ ತೋರಿದ್ದಾರೆ. ನಿವಾಸಿಗಳಿಗೆ ಟೆಸ್ಟಿಂಗ್ ಮಾಡದೆ ತಮ್ಮ ಜವಬ್ದಾರಿ ಮರೆತಂತೆ ಇದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ಮುಂಬೈನಿಂದ ಬಂದಂತಹ ವಲಸೆ ಕಾರ್ಮಿಕರನ್ನ ಕ್ವಾರಂಟೈನ್ ಮಾಡಲಾಗಿತ್ತು. ಇಲ್ಲಿ ಅಧಿಕಾರಗಳ ನಿರ್ಲಕ್ಷ್ಯತನದಿಂದ ಕ್ವಾರೆಂಟೈನ್ ನಿವಾಸಿಗಳು ನರಳುತ್ತಿದ್ದಾರೆ. ತಮ್ಮ ಗೋಳು ತೋಡಿಕೊಂಡ ಅವರು, ನಮ್ಮನ್ನ ಬೇಗ ಟೆಸ್ಟಿಂಗ್ ಮಾಡಿಸಿ ಇಲ್ಲಿಂದ ಹೋರಹೋಗಲು ಅನುಕೂಲ ಮಾಡಿಕೊಡಿ. ಸರ್ಕಾರಕ್ಕೆ ಕೈ ಮುಗಿದು ಬೇಡಿಕೋಳ್ಳುತ್ತೇವೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ, ಪಿಪಿಇ ಟೆಸ್ಟಿಂಗ್ ಕಿಟ್ಗಳ ವ್ಯವಸ್ಥೆ ಇಲ್ಲ- ನಾವಾದರೂ ಏನು ಮಾಡುವುದು. ಕಿಟ್ಗಳಿಲ್ಲದೇ ಕ್ವಾರಂಟೈನ್ನಲ್ಲಿನ ನಿಮ್ಮನ್ನ ಪರೀಕ್ಷೆ ಹೇಗೆ ಮಾಡುವುದು? ಪಿಪಿಇ ಕಿಟ್ಗಳ ಕೊರತೆ ಇದೆ ಎನ್ನುವ ಮೂಲಕ ತಮ್ಮ ಅಸಹಾಯಕತೆ ಹೊರ ಹಾಕಿದ್ದಾರೆ.